ಸೋಮವಾರ, ಮೇ 23, 2022
20 °C

ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್: ಪಾವಗಡ ಶಾಸಕರ ವಿರುದ್ಧ ಬಿಜೆಪಿ ಕಿಡಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಬಿಜೆಪಿ ಟೀಕಿಸಿದೆ.

ಪಾವಗಡ ಶಾಸಕ ವೆಂಕಟರಮಣಪ್ಪ ಅವರು ಯುವಕನೊಬ್ಬನ ಕಪಾಳಕ್ಕೆ ಹೊಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಬಿಜೆಪಿ, ಆಕ್ರೋಶ ವ್ಯಕ್ತಪಡಿಸಿದೆ.

‘ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್. ಅಂದು ಕರೆಂಟ್‌ ಕೇಳಿದ ನಾಗರಿಕನಿಗೆ ಜೈಲು ಭಾಗ್ಯ, ಇಂದು ನೀರು ಕೇಳಿದವನಿಗೆ ಕಪಾಳ ಮೋಕ್ಷದ ಭಾಗ್ಯ. ಕೊತ್ವಾಲನ ಶಿಷ್ಯನೇ ಕೆಪಿಸಿಸಿಯ ಅಧ್ಯಕ್ಷನಾಗಿರುವಾಗ ಸೌಜನ್ಯತೆ ಎಂಬ ಪದಕ್ಕೆ ಅರ್ಥ ಇರಲು ಹೇಗೆ ಸಾಧ್ಯ?’ ಎಂದು #ಕಾಂಗ್ರೆಸ್‌ಗೂಂಡಾಗಿರಿ ಹ್ಯಾಷ್‌ಟ್ಯಾಗ್‌ನೊಂದಿಗೆ ಬಿಜೆಪಿ ಟ್ವೀಟ್ ಮಾಡಿದೆ.

‘ಕಾಂಗ್ರೆಸ್ ಪಕ್ಷವು ಭಯೋತ್ಪಾದಕರನ್ನು, ಜಿಹಾದಿಗಳನ್ನು, ಕೊಲೆಗಾರರನ್ನು, ಕಲ್ಲು ತೂರಾಟಗಾರರನ್ನು, ಒತ್ತುವರಿ ಮಾಡುವವರನ್ನು ಬೆಂಬಲಿಸುತ್ತಿದೆ. ಇವುಗಳಲ್ಲಿ ತೊಂಡಗಿಸಿಕೊಂಡಿರುವವರು ಯಾರಾದರೂ ಇದ್ದರೆ ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಬಹುದು. ಆ ಪಕ್ಷವು ಅವರಿಗೆ ಜಾಮೀನು ಕೊಡಿಸಲು, ರಕ್ಷಿಸಲು ಮುಂದೆ ಬರಲಿದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

‘ಕೈ ನಾಯಕರು ಕೈ ಎತ್ತುವಲ್ಲಿ ಪ್ರವೀಣರು. ಚುನಾವಣೆ ಸಮಯದಲ್ಲಿ ಮತದಾರರು ಬೇಕು, ಪಕ್ಷದ ಕಾರ್ಯಕರ್ತರು ಬೇಕು, ಆಮೇಲೆ ಇಬ್ಬರಿಗೂ ಸಿಗೋದು ಬರಿ ಕಪಾಳ ಮೋಕ್ಷ. ಕೈ ಹಿಡಿದು ನಡೆಸುವುದು ನಾಯಕರ ಲಕ್ಷಣ, ಕೈ ಎತ್ತುವುದು ಖಳನಾಯಕರ ಲಕ್ಷಣವೇ ಸರಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಕಾರ್ಯಕರ್ತನಿಗೆ ಹೊಡೆದಿದ್ದ ಹಳೆಯ ವಿಡಿಯೊವನ್ನು ಲಗತ್ತಿಸಿ ಬಿಜೆಪಿ ಟ್ವೀಟ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು