ಮಂಗಳವಾರ, ಡಿಸೆಂಬರ್ 1, 2020
22 °C

ಕೇರಳ ರಾಜ್ಯಪಾಲರಿಗೆ ಕೋವಿಡ್‌ ದೃಢ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದ ರಾಜ್ಯಪಾಲರಾದ ಆರಿಫ್‌ ಮೊಹಮ್ಮದ್‌ ಖಾನ್‌ ಅವರಿಗೆ ಕೊರೊನಾ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

‘ನನಗೆ ಕೊರೊನಾ ಸೋಂಕು ಇರುವುದು ವೈದ್ಯಕೀಯ ತಪಾಸಣೆಯಲ್ಲಿ ಖಚಿತವಾಗಿದೆ. ಆದರೆ ಸೋಂಕಿನ ಲಕ್ಷಣಗಳು ನನ್ನಲ್ಲಿ ಇಲ್ಲ. ಕಳೆದ ವಾರ ನವದೆಹಲಿಯಲ್ಲಿ ನನ್ನ ಜೊತೆ ಸಂಪರ್ಕಕ್ಕೆ ಬಂದವರೆಲ್ಲಾ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ ಅಥವಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ’ ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ನವದೆಹಲಿಯಲ್ಲಿದ್ದ ರಾಜ್ಯಪಾಲರು ಶುಕ್ರವಾರ ಬೆಳಿಗ್ಗೆ ತಿರುವನಂತಪುರಕ್ಕೆ ವಾಪಸ್ಸಾಗಿದ್ದರು. ಶನಿವಾರ ಕೋವಿಡ್‌ ಪರೀಕ್ಷೆಯನ್ನು ಸ್ವಯಂಪ್ರೇರಿತರಾಗಿ ಮಾಡಿಸಿಕೊಂಡಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು