ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಲ್ಲಿ ಕೋವಿಡ್ -19 ಹರಡದಂತೆ ಎಚ್ಚರ ವಹಿಸಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್

Last Updated 26 ಆಗಸ್ಟ್ 2021, 13:53 IST
ಅಕ್ಷರ ಗಾತ್ರ

ತಿರುವನಂತಪುರಂ (ಪಿಟಿಐ): ಕೋವಿಡ್ -19 ಸೋಂಕುಮನೆಗಳ ಒಳಾಂಗಣದಲ್ಲೂ ಪಸರಿಸದಂತೆ ಎಚ್ಚರ ವಹಿಸುವಂತೆ ಮತ್ತು ರೋಗವನ್ನು ದೂರವಿರಿಸಲು ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರಜನರನ್ನು ಒತ್ತಾಯಿಸಿದರು.

ಆರೋಗ್ಯ ಇಲಾಖೆಯ ಇತ್ತೀಚಿನ ಅಧ್ಯಯನ ಉಲ್ಲೇಖಿಸಿದ ಅವರು, ರಾಜ್ಯದ ಶೇ 35ರಷ್ಟು ಜನರು ಮನೆಯೊಳಗೇ ಈ ರೋಗಕ್ಕೆ ತುತ್ತಾಗಿರುವುದು ಪತ್ತೆಯಾಗಿದೆ. ಸದ್ಯದ ಪರಿಸ್ಥಿತಿಯು ಮನೆಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದಾಗ, ಇತರ ಸದಸ್ಯರಿಗೂ ರೋಗ ಹರಡುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೋಮ್ ಕ್ವಾರಂಟೈನ್ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಈ ಪರಿಸ್ಥಿತಿಗೆ ಕಾರಣವೆಂದು ದೂಷಣೆ ಮಾಡಿದ ಸಚಿವೆ, ಮನೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಹೊಂದಿರುವವರು ಮಾತ್ರ ಹೋಂ ಕ್ವಾರಂಟೈನ್‌ಗೆ ಆದ್ಯತೆ ನೀಡಬೇಕು. ಉಳಿದವರು ವಸತಿ ಕೋವಿಡ್-ಕೇರ್ ಕೇಂದ್ರಗಳಿಗೆ (ಡಿಸಿಸಿ) ಹೋಗಬೇಕು. ಹೋಂಕ್ವಾರಂಟೈನ್‌ನಲ್ಲಿರುವವರು ತಮ್ಮ ಕೊಠಡಿಯಿಂದ ಹೊರ ಹೋಗಬಾರದು. ಒಳಾಂಗಣ ಪ್ರಸರಣದ ಅಪಾಯ ತಪ್ಪಿಸಲು ಮನೆಯ ಎಲ್ಲ ಸದಸ್ಯರು ಮಾಸ್ಕ್‌ ಧರಿಸಬೇಕು ಎಂದು ಹೇಳಿದರು.

ರೋಗಿಯು ಬಳಸುವ ಪಾತ್ರೆಗಳನ್ನು ಅಥವಾ ಇತರ ವಸ್ತುಗಳನ್ನು ಬೇರೆ ಯಾರೂ ಬಳಸಬಾರದು. ಮನೆಯ ಪ್ರತಿಯೊಬ್ಬ ಸದಸ್ಯರು ಮುನ್ನೆಚ್ಚರಿಕೆಯಾಗಿ ಸೋಪ್‌ನಿಂದ ಕೈ ತೊಳೆಯಬೇಕು ಎಂದು ಸಚಿವೆ ಹೇಳಿದರು.

ರೋಗದ ವಿರುದ್ಧ ಹೋರಾಡಲು ಜನರು ಅನುಸರಿಸಬೇಕಾದ ನಿರ್ದೇಶನಗಳ ಕೈಪಿಡಿಯನ್ನು ಸಚಿವೆ ಇದೇ ಸಂದರ್ಭ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT