ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತದ ದುರ್ಗಾ ಪೂಜೆಗೆ ಯುನೆಸ್ಕೋ ‘ಪಾರಂಪರಿಕ’ ಮನ್ನಣೆ: ಮೋದಿ, ಮಮತಾ ಹರ್ಷ

Last Updated 16 ಡಿಸೆಂಬರ್ 2021, 13:40 IST
ಅಕ್ಷರ ಗಾತ್ರ

ನವದೆಹಲಿ: ಕೋಲ್ಕತ್ತಾದ ದುರ್ಗಾ ಪೂಜೆ ಹಬ್ಬಕ್ಕೆ ಯುನೆಸ್ಕೋ ಬುಧವಾರ ಪಾರಂಪರಿಕ ಸ್ಥಾನಮಾನದ ಮನ್ನಣೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯುನೆಸ್ಕೋದ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

‘ಕೋಲ್ಕತ್ತಾದಲ್ಲಿನ ದುರ್ಗಾ ಪೂಜೆಯನ್ನು ಅಮೂರ್ತ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತಕ್ಕೆ ಅಭಿನಂದನೆಗಳು‘ ಎಂದು ಯುನೆಸ್ಕೋ ಬುಧವಾರ ಟ್ವೀಟ್‌ ಮಾಡಿದೆ.

ಯುನೆಸ್ಕೋದ ನಿರ್ಧಾರವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆ ಮತ್ತು ಸಂತೋಷದ ವಿಷಯವಿದು‘ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ‘ನಮ್ಮ ಸಂಪ್ರದಾಯ ಮತ್ತು ನೀತಿಗಳಲ್ಲಿನ ಅತ್ಯುತ್ತಮವಾದುದನ್ನು ದುರ್ಗಾ ಪೂಜೆಯು ಎತ್ತಿ ತೋರಿಸುತ್ತದೆ. ಕೋಲ್ಕತ್ತಾದ ದುರ್ಗಾ ಪೂಜೆಯು ಪ್ರತಿಯೊಬ್ಬರೂ ಅನುಭವಿಸಬೇಕಾದ ಅನುಭೂತಿ,’ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

‘ದುರ್ಗಾ ಪೂಜೆ ಕೇವಲ ಹಬ್ಬವಲ್ಲ. ಅದು ಒಂದು ಭಾವನೆ,’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ‘ಬಂಗಾಳಕ್ಕೆ ಇದು ಹೆಮ್ಮೆಯ ಕ್ಷಣ. ಪ್ರಪಂಚದಾದ್ಯಂತ ಪ್ರತಿಯೊಬ್ಬ ಬಂಗಾಳಿಗೂ, ದುರ್ಗಾಪೂಜೆಯು ಹಬ್ಬಕ್ಕಿಂತ ಹೆಚ್ಚು. ಅದು ಎಲ್ಲರನ್ನೂ ಒಂದುಗೂಡಿಸುವ ಭಾವನೆಯಾಗಿದೆ. ಈಗ ದುರ್ಗಾ ಪೂಜೆಯನ್ನು ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಗೆ ಸೇರಿಸಲಾಗಿದೆ. ನಾವೆಲ್ಲರೂ ಸಂತೋಷಗೊಂಡಿದ್ದೇವೆ,’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಹಿಂದೂ ದೇವತೆ ದುರ್ಗೆಯ ಹತ್ತು ದಿನಗಳ ಆರಾಧನೆಯಾದ ‘ದುರ್ಗಾ ಪೂಜೆ’ಯು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಆಚರಿಸಲ್ಪಡುತ್ತದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಮತ್ತು ಭಾರತದ ಇತರ ಭಾಗಗಳಲ್ಲಿಯೂ ಆಚರಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT