ಗುರುವಾರ , ಫೆಬ್ರವರಿ 25, 2021
27 °C

ಡ್ರಗ್ಸ್ ಪ್ರಕರಣ: ಬಿಜೆಪಿ ನಾಯಕ ರಾಕೇಶ್ ಸಿಂಗ್‌ಗೆ ಕೋಲ್ಕತ್ತ ಪೊಲೀಸ್ ಸಮನ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

Rakesh Singh

ಕೋಲ್ಕತ್ತ: ಡ್ರಗ್ಸ್ ವಶಪಡಿಸಿಕೊಂಡ ಪ‍್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ರಾಕೇಶ್ ಸಿಂಗ್ ಅವರಿಗೆ ಕೋಲ್ಕತ್ತ ಪೊಲೀಸರು ಸಮನ್ಸ್ ನೀಡಿದ್ದಾರೆ. ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ (ಪಶ್ಚಿಮ ಬಂಗಾಳ ಘಟಕ) ಪಮೇಲಾ ಗೋಸ್ವಾಮಿ ಅವರಿಂದ ಕೊಕೈನ್ ವಶಪಡಿಸಿಕೊಂಡಿರುವ ಪ್ರಕರಣ ಇದಾಗಿದೆ.

ಗೋಸ್ವಾಮಿ ಹಾಗೂ ಅವರ ಸ್ನೇಹಿತನನ್ನು ಕಳೆದ ವಾರ ಕೊಕೇನ್ ಸಹಿತ ಬಂಧಿಸಲಾಗಿತ್ತು. ತಮ್ಮ ವಿರುದ್ಧ ರಾಕೇಶ್ ಸಿಂಗ್ ಸಂಚು ಹೂಡಿದ್ದಾರೆ ಎಂದು ಗೋಸ್ವಾಮಿ ಆರೋಪಿಸಿದ್ದರು.

‘ಅವರನ್ನು (ಸಿಂಗ್) ಫೆಬ್ರುವರಿ 23ರಂದು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದು ಐಪಿಎಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ: ಡ್ರಗ್ಸ್‌ ಪ್ರಕರಣ: ಪಶ್ಚಿಮ ಬಂಗಾಳ ಬಿಜೆಪಿ ಯುವ ನಾಯಕಿ ಪಮೇಲಾ ಬಂಧನ

ತಮ್ಮ ವಿರುದ್ಧ ಗೋಸ್ವಾಮಿ ಅವರು ಆರೋಪ ಮಾಡಿದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದ ಸಿಂಗ್, ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದಿದ್ದರು.

90 ಗ್ರಾಂ ಕೊಕೈನ್‌ ಹೊಂದಿದ್ದ ಕಾರಣಕ್ಕೆ ಪಮೇಲಾ ಗೋಸ್ವಾಮಿ ಮತ್ತು ಅವರ ಸ್ನೇಹಿತ ಪ್ರದೀಪ್‌ ಕುಮಾರ್‌ ದೇ ಅವರನ್ನು ಇದೇ 19ರಂದು ಬಂಧಿಸಲಾಗಿತ್ತು. ‘ಇದರಲ್ಲಿ ಪಕ್ಷದ ತಮ್ಮ ಸಹದ್ಯೋಗಿಯಾದ ಮತ್ತು ಕೈಲಾಶ್ ವಿಜಯವರ್ಗಿಯಾ ಅವರ ಸಹಾಯಕರಾದ ರಾಕೇಶ್ ಸಿಂಗ್ ಅವರ ಪಿತೂರಿ ಇದೆ. ರಾಕೇಶ್‌ ಸಿಂಗ್‌ ಅವರನ್ನು ಬಂಧಿಸಬೇಕು. ಈ ಪ್ರಕರಣವನ್ನು ಸಿಐಡಿಗೆ ವಹಿಸಬೇಕು’ ಎಂದು ಸಿಟಿ ಕೋರ್ಟ್‌ನಿಂದ ಪೊಲೀಸರು ಕರೆದೊಯ್ಯುವಾಗ ಗೋಸ್ವಾಮಿ ವರದಿಗಾರರಿಗೆ ತಿಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು