ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಸೇನಾ ತಾಲೀಮಿಗೆ ಸಾಕ್ಷಿಯಾದ ದ. ಕೊರಿಯಾ ರಕ್ಷಣಾ ಸಚಿವ

ಭಾರತಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಸುಹ್ ವೂಕ್
Last Updated 27 ಮಾರ್ಚ್ 2021, 15:43 IST
ಅಕ್ಷರ ಗಾತ್ರ

ಆಗ್ರಾ: ಭಾರತೀಯ ಸೇನೆಯ ಪ್ಯಾರಾ ಟ್ರೂಪರ್‌ಗಳು ಶನಿವಾರ ಆಗ್ರಾದಲ್ಲಿ ನಡೆಸಿದ ತಾಲೀಮಿಗೆ ದಕ್ಷಿಣ ಕೊರಿಯಾದ ರಕ್ಷಣ ಸಚಿವ ಸುಹ್ ವೂಕ್ ಅವರು ಸಾಕ್ಷಿಯಾದರು.

ಭಾರತ ಮತ್ತು ದಕ್ಷಿಣ ಕೊರಿಯಾದ ನಡುವೆ ದ್ವಿಪಕ್ಷೀಯ ರಕ್ಷಣೆ ಮತ್ತು ಮಿಲಿಟರಿ ಸಹಕಾರವನ್ನು ವೃದ್ಧಿಸುವ ಉದ್ದೇಶದಿಂದ ಸುಹ್ ವೂಕ್ ಅವರು ಗುರುವಾರದಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ.

ಆಗ್ರಾದಲ್ಲಿ ನಡೆದ ಭಾರತೀಯ ಸೇನೆಯ ಪ್ಯಾರಾ ಟ್ರೂಪರ್‌ಗಳು ನಡೆಸಿದ ಅರ್ಧಗಂಟೆಯ ತಾಲೀಮಿಗೆ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರೂ ಸಾಕ್ಷಿಯಾದರು.

ಸೇನೆಯ ಒಟ್ಟು 650 ಸೈನಿಕರು ನಡೆಸಿದ ವಿವಿಧ ಬಗೆಯ ಯುದ್ಧದ ಕಸರತ್ತುಗಳು ಗಮನ ಸೆಳೆದವು.

ಸೇನೆಯ ತಾಲೀಮಿನ ವೀಕ್ಷಿಸಿದ ಬಳಿಕ ಸುಹ್ ವೂಕ್ ಅವರು ಭಾರತೀಯ ಸೇನೆಯ 60 ಪ್ಯಾರಾ ಫೀಲ್ಡ್ ಆಸ್ಪತ್ರೆಗೆ ಭೇಟಿ ನೀಡಿದರು. 1950ರ ಕೊರಿಯನ್ ಯುದ್ಧದ ಸಮಯದಲ್ಲಿ ವಿಶ್ವಸಂಸ್ಥೆ ಹಾಗೂ ದಕ್ಷಿಣ ಕೊರಿಯಾದ ಸಿಬ್ಬಂದಿಗೆ ಇಲ್ಲಿ ವೈದ್ಯಕೀಯ ನೆರವು ನೀಡಲಾಗಿತ್ತು.

ವೂಕ್ ಅವರು ಶುಕ್ರವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಜತೆಗೂಡಿ ಇಂಡೊ–ಕೊರಿಯಾದ ಸ್ನೇಹ ಉದ್ಯಾನವನ್ನು ದೆಹಲಿಯ ಕಂಟೋನ್ಮೆಂಟ್‌ನಲ್ಲಿ ಉದ್ಘಾಟಿಸಿದ್ದರು.

ದಕ್ಷಿಣ ಕೊರಿಯಾವು, ಭಾರತಕ್ಕೆ ಶಸ್ತ್ರಾಸ್ತ್ರ ಹಾಗೂ ಮಿಲಿಟರಿ ಉಪಕರಣಗಳನ್ನು ಪೂರೈಸುವ ಮುಖ್ಯ ರಾಷ್ಟ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT