ಬುಧವಾರ, ಆಗಸ್ಟ್ 10, 2022
21 °C

ಗಡಿ ಬಿಕ್ಕಟ್ಟು: ರಾಜತಾಂತ್ರಿಕ ಮಾತುಕತೆ ಪುನರಾರಂಭಿಸಿದ ಭಾರತ–ಚೀನಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸೇನಾ ಸಂಘರ್ಷದ ಬಗ್ಗೆ ರಾಜತಾಂತ್ರಿಕ ಮಾತುಕತೆ ಪುನರಾರಂಭಿಸಿರುವ ಭಾರತ ಮತ್ತು ಚೀನಾ, ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಘರ್ಷಣೆ ನಡೆಯಬಹುದಾದ ಎಲ್ಲ ಸ್ಥಳಗಳಿಂದಲೂ ಶೀಘ್ರದಲ್ಲೇ ಎರಡೂ ರಾಷ್ಟ್ರಗಳ ಯೋಧರು ಹಿಂದಕ್ಕೆ ಸರಿಯುವ ನಿಟ್ಟಿನಲ್ಲಿ ಕೆಲಸ ಮುಂದುವರಿಸಲು ಶುಕ್ರವಾರ ಒಪ್ಪಂದ ಮಾಡಿಕೊಂಡವು.

‘ಆನ್‌ಲೈನ್‌ ಮುಖಾಂತರ ನಡೆದ ಸಭೆಯಲ್ಲಿ, ದ್ವಿಪಕ್ಷೀಯ ಒಪ್ಪಂದದಂತೆ, ಎಲ್‌ಎಸಿಯಲ್ಲಿ ನಿಯೋಜನೆಗೊಂಡಿರುವ ಎಲ್ಲ ಯೋಧರನ್ನು ತಕ್ಷಣವೇ ಹಿಂದಕ್ಕೆ ಸರಿಸುವ ನಿಟ್ಟಿನಲ್ಲಿ ಮುಂದಿನ ಹಂತದ ಸೇನಾ ಅಧಿಕಾರಿಗಳ ಮಟ್ಟದ ಮಾತುಕತೆಯು ಶೀಘ್ರದಲ್ಲೇ ನಡೆಯಬೇಕು ಎನ್ನುವುದನ್ನೂ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ’ ಎಂದು ವಿದೇಶಾಂಗ ಇಲಾಖೆ(ಎಂಇಎ) ತಿಳಿಸಿದೆ.

‘ಈ ನಿಟ್ಟಿನಲ್ಲಿ ಅ.12 ಹಾಗೂ ನ.6ರಂದು ನಡೆದ ಸೇನಾ ಅಧಿಕಾರಿಗಳ ಮಟ್ಟದ ಏಳನೇ ಮತ್ತು ಎಂಟನೇ ಸುತ್ತಿನ ಮಾತುಕತೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ಎಲ್‌ಎಸಿಯಲ್ಲಿ ಸ್ಥಿರತೆ ಕಂಡುಕೊಳ್ಳಲು ಈ ಸಭೆಗಳು ಕಾರಣವಾಗಿವೆ’ ಎಂದು ಎಂಇಎ ತಿಳಿಸಿದೆ. ‘ರಾಜತಾಂತ್ರಿಕ ಹಾಗೂ ಸೇನಾ ಮಟ್ಟದಲ್ಲಿ ನಿಕಟ ಸಮಾಲೋಚನೆ ಇರಿಸಿಕೊಳ್ಳಲು ಎರಡೂ ರಾಷ್ಟ್ರಗಳು ಒಪ್ಪಿವೆ’ ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು