ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ನೇಮಕಾತಿ: ಯುವಕರ ವಯೋಮಿತಿ ಮೀರುತ್ತಿದ್ದರೂ ಸರ್ಕಾರ ಮೌನ– ವರುಣ್ ಟೀಕೆ

Last Updated 29 ಅಕ್ಟೋಬರ್ 2022, 11:32 IST
ಅಕ್ಷರ ಗಾತ್ರ

ನವದೆಹಲಿ: ಉತ್ತರಪ್ರದೇಶದಲ್ಲಿ ಪೊಲೀಸ್ ನೇಮಕಾತಿಗಾಗಿ ನಾಲ್ಕು ವರ್ಷಗಳಿಂದಕಾಯುತ್ತಿರುವ ಯುವಕರು ಉದ್ಯೋಗಕ್ಕೆ ನಿಗದಿಪಡಿಸಿರುವ ವಯೋಮಿತಿ ಮೀರುತ್ತಿದ್ದಾರೆ. ಆದರೂ ಸರ್ಕಾರ ಮೌನವಹಿಸಿದೆ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಶನಿವಾರ ಟೀಕಿಸಿದ್ದಾರೆ.

‘ಯಾವುದೇ ನೇಮಕಾತಿಯೂ ಆಗಿಲ್ಲ. ಆ ಬಗ್ಗೆ ಭರವಸೆಯೂ ದೊರೆತಿಲ್ಲ. ಹಾಗಾಗಿ, ಈ ಯುವಕರು ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ದನಿ ಎತ್ತಿದ್ದಾರೆ. ಆದರೂ ಅವರಿಗೆ ಯಾವುದೇ ಪರಿಹಾರ ದೊರಕಿಲ್ಲ’ ಎಂದು ವರುಣ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಆ ವಿದ್ಯಾರ್ಥಿಗಳು ಬೀದಿಗಿಳಿದರೆ ಅವರನ್ನು ತೊಂದರೆ ಕೊಡುವವರು ಎಂದು ಕರೆಯುತ್ತಾರೆ. ಇದು ಅನ್ಯಾಯವಲ್ಲವೇ’ ಎಂದೂ ವರುಣ್ ಪ್ರಶ್ನಿಸಿದ್ದಾರೆ.

ಬಿಜೆಪಿ ಸಂಸದರಾಗಿರುವ ವರುಣ್ ಗಾಂಧಿ ತಮ್ಮದೇ ಪಕ್ಷದ ಆಡಳಿತವಿರುವ ಉತ್ತರಪ್ರದೇಶ ಹಾಗೂ ಕೇಂದ್ರ ಸರ್ಕಾರಗಳ ಹಲವು ವಿಷಯಗಳ ಬಗ್ಗೆ ಅನೇಕ ಸಲ ಟೀಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT