ಭಾನುವಾರ, ಮಾರ್ಚ್ 26, 2023
24 °C

ಲಖಿಂಪುರ–ಖೇರಿ ಪ್ರಕರಣ: ಮತ್ತೆ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖಿಂಪುರ–ಖೇರಿ, ಉತ್ತರ ಪ್ರದೇಶ: ಲಖಿಂಪುರ– ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಎಸ್‌ಐಟಿ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ರಂಜಿತ್‌ ಸಿಂಗ್‌ ಮತ್ತು ಅವತಾರ್‌ ಸಿಂಗ್‌ ಅಲಿಯಾಸ್‌ ನಿಕ್ಕು ಎಂದು ಗುರುತಿಸಲಾಗಿದೆ.

ಇವರ ವಿರುದ್ಧ ಜಿಲ್ಲೆಯ ಟಿಕೋನಿಯಾ ಪೊಲೀಸ್‌ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳಡಿ ಎರಡನೇ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಜಿಲ್ಲಾ ಅಪರಾಧ ವಿಭಾಗ ಪತ್ರಿಕಾ ಪ್ರಕಟಣೆಯೊಂದರಲ್ಲಿ ತಿಳಿಸಿದೆ.  

ಸುಮಿತ್‌ ಜೈಸ್ವಾಲ್‌ ಎಂಬಾತ ಟಿಕೋನಿಯಾ ಠಾಣೆಯಲ್ಲಿ ದಾಖಲಿಸಿದ ಎರಡನೇ ಪ್ರಕರಣದಲ್ಲಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ.  

ರಂಜಿತ್‌ ಸಿಂಗ್‌ ಮತ್ತು ಅವತಾರ್‌ ಸಿಂಗ್‌ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಹಿರಿಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಸ್‌.ಪಿ. ಯಾದವ್‌ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು