ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲತಾ ದೀದಿ ಮತ್ತು ಕಿಶೋರ್ ದಾ!

Last Updated 6 ಫೆಬ್ರುವರಿ 2022, 10:02 IST
ಅಕ್ಷರ ಗಾತ್ರ

ಗಾಯನ ಪ್ರಪಂಚದ ಖ್ಯಾತನಾಮರಾದ ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರ ನಡುವಿನ ಸಂಬಂಧ ಅತ್ಯಂತ ವಿಶಿಷ್ಟವಾದದ್ದು. ದೂರದರ್ಶನಕ್ಕಾಗಿ ಕಿಶೋರ್ ಕುಮಾರ್ ಅವರು ನೀಡಿದ್ದ ಏಕೈಕ ಟಿವಿ ಸಂದರ್ಶನವನ್ನು ನಡೆಸಿಕೊಟ್ಟಿದ್ದದ್ದು ಬೇರೆ ಯಾರೂ ಅಲ್ಲ, ಇದೇ ಲತಾ ಮಂಗೇಶ್ಕರ್‌ ಅವರು.

ಲತಾ–ಕಿಶೋರ್‌ ನಡೆಸಿಕೊಡುತ್ತಿದ್ದ ಗಾಯನ ಕಾರ್ಯಕ್ರಮಗಳು ಜಗತ್ತಿನಾದ್ಯಂತ ಅತ್ಯಂತ ಯಶಸ್ವಿ ಮತ್ತು ಸ್ಮರಣೀಯ ಎನಿಸಿಕೊಂಡಿವೆ.

1948ರ 'ಜಿದ್ದಿ' ಚಿತ್ರದ 'ಯೇ ಕೌನ್ ಆಯಾ ರೇ' ಹಾಡು ಲತಾ ಮತ್ತು ಕಿಶೋರ್‌ ಕುಮಾರ್‌ ಅವರ ಮೊದಲ ಯುಗಳ ಗೀತೆ (ಡುಯೆಟ್‌). ಇದು ಅವರ ಇಬ್ಬರ ನುಡುವೆ ಹೆಗ್ಗುರುತಾಗಿ ಉಳಿದಿಕೊಂಡಿರುವ ಹಾಡು ಮಾತ್ರಲ್ಲ, ಇದು ಹಲವು ಸ್ಟಾರ್‌ಗಳನ್ನು ಪರಿಚಯಿಸಿದೆ. ದೇವಾನಂದ್‌, ಕಾಮಿನಿ ಕೌಶಲ್, ಪ್ರಾಣ್, ಲತಾ ಹಾಗೂ ಕಿಶೋರ್. ಈ ಚಿತ್ರವನ್ನು ಶಾಹೀದ್ ಲತೀಫ್ ನಿರ್ದೇಶಿಸಿದ್ದಾರೆ ಮತ್ತು ಇಸ್ಮತ್ ಚುಗ್ತಾಯ್ ಅವರ ಕಥೆಯನ್ನು ಆಧರಿಸಿದೆ.

ಕೆಲ ವರ್ಷಗಳ ಹಿಂದೆ, ಕಿಶೋರ್ ಕುಮಾರ್ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಲತಾ ಹೀಗೆ ಬರೆದುಕೊಂಡಿದ್ದರು: ' ಇಂದು ಕಿಶೋರ್‌ ಅವರ ಜಯಂತಿ. ಅವರು ಎಷ್ಟು ಒಳ್ಳೆಯ ಗಾಯಕರಾಗಿದ್ದರೋ, ಅಷ್ಟೇ ಒಳ್ಳೆಯ ವ್ಯಕ್ತಿಯೂ ಆಗಿದ್ದರು. ಕಿಶೋರ್‌ ಅವರ ಅನುಪಸ್ಥಿತಿ ನನ್ನನ್ನು ಯಾವಾಗಲೂ ಕಾಡುತ್ತದೆ' ಎಂದಿದ್ದರು.

ಲತಾ-ಕಿಶೋರ್ ಅವರ ಮೊದಲ ಭೇಟಿ ಆಸಕ್ತಿದಾಯಕವಾಗಿತ್ತು. ಅವರು ಬಾಂಬೆ ಟಾಕೀಸ್‌ನಲ್ಲಿ ಭೇಟಿಯಾಗಿದ್ದರು.

ರಾಗ ಸಂಯೋಜಕ ಖೇಮಚಂದ್ ಪ್ರಕಾಶ್ ಅವರ ಧ್ವನಿಮುದ್ರಣಕ್ಕಾಗಿ, ಲತಾ ಮಂಗೇಶ್ಕರ್ ಅವರು ಗ್ರಾಂಟ್ ರೋಡ್‌ನಿಂದ ಮಲಾಡ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಒಂದು ದಿನ, ಯುವಕನೊಬ್ಬ ಬಾಂಬೆ ಸೆಂಟ್ರಲ್‌ನಲ್ಲಿ (ಈಗ ಮುಂಬೈ ಸೆಂಟ್ರಲ್‌ನಲ್ಲಿ) ತಾವಿದ್ದ ಕಂಪಾರ್ಟ್‌ಮೆಂಟ್‌ಗೆ ಹತ್ತಿ, ತಮ್ಮೊಂದಿಗೆ ಮಲಾಡ್‌ಗೆ ಇಳಿದಿದ್ದನ್ನು ಲತಾ ಗಮನಿಸಿದ್ದರು. ಲತಾ ಅವರು ನಿಲ್ದಾಣದಿಂದ ಟಾಂಗಾ ಮೂಲಕ ಹೊರಟರು. ಆ ಯುವಕನೂ ಟಾಂಗಾ ತೆಗೆದುಕೊಂಡು ಅವರನ್ನು ಹಿಂಬಾಲಿಸಿದ್ದನ್ನು ಲತಾ ಗಮನಿಸಿದ್ದರು.

ಖೇಮಚಂದ್ ಪ್ರಕಾಶ್ ಅವರು ಸ್ಟುಡಿಯೋದಲ್ಲಿ ಅವರಿಬ್ಬರನ್ನೂ ಪರಿಚಯಿಸಿದಾಗ, ಅವರಿಬ್ಬರು ಮನಸಾರೆ ನಕ್ಕಿದ್ದರು.

ರಕ್ಷಾ ಬಂಧನದ ದಿನ, ಕಿಶೋರ್ ದಾ ಅವರು ಮಂಗೇಶ್ಕರರ ಮನೆಯಾದ 'ಪ್ರಭುಕುನಿ'ಗೆ ಭೇಟಿ ನೀಡುತ್ತಿದ್ದರು.


"ತೇರೆ ಬಿನಾ ಜಿಂದಗಿ ಸೆ", "ಗಾತಾ ರಹೇ ಮೇರಾ ದಿಲ್", "ಭೀಗೀ ಭೀಗಿ ರಾತೊನ್ ಮೇ", "ದೇಖಾ ಏಕ್ ಖ್ವಾಬ್", "ತೇರೆ ಮೇರೆ ಮಿಲನ್ ಕಿ ಯೇ ರೈನಾ", "ಇಸ್ ಮೋಡ್ ಸೇ ಜಾತೇ ಹೈ" “ಆಪ್ಕಿ ಆಂಖೋಂ ಮೇ ಕುಚ್ ಮೆಹಕೆ ಹುಯೇ ಸೆ ಖ್ವಾಬ್ ಹೈಂ”, “ಹಜಾರ್ ರಾಹೆನ್ ಮುದ್ಕೆ ದೇಖಿನ್”, 'ಕೋರಾ ಕಾಗಜ್ ಥಾ ಯೇ ಮಾನ್ ಮೇರಾ," "ಪನ್ನಾ ಕಿ ತಮನ್ನಾ ಹೈ", "ಹಮ್ ದೋನೋ ದೋ ಪ್ರೇಮಿ" ಇವರಿಬ್ಬರ ಸೂಪರ್‌ ಹಿಟ್‌ ಹಾಡುಗಳು.


''ಲತಾಜಿ ಒಮ್ಮೆ ಕಿಶೋರ್ ಕುಮಾರ್ ಬಗ್ಗೆ ಹೇಳಿದ್ದರು. ಲತಾ ಮತ್ತು ಆಶಾ ಅವರು ಕಿಶೋರ್ ದಾ ಅವರೊಂದಿಗೆ ಹಾಡುವುದನ್ನು ನಿಲ್ಲಿಸಿದ್ದರಂತೆ. ‘ಕಿಶೋರ್ ಬಂದು ನಮ್ಮಿಬ್ಬರನ್ನೂ ಮಾತನಾಡಿಸಿ ಹಾಸ್ಯ ಮಾಡಿ, ನಗುವಂತೆ ಮಾಡುತ್ತಿದ್ದರು. ಇದರಿಂದ ನಮ್ಮ ದನಿಗಳು ದಣಿಯುತ್ತಿದ್ದವು. ಆದರೆ, ಅವರು ಮಾತ್ರ ಹಾಡು ಹಾಡಿ ಹೊರಟು ಹೋಗುತ್ತಿದ್ದರು. ಹೀಗಾಗಿ ನಾವು ಅವರನ್ನು ಹಾಡಲು ಬಿಟ್ಟುಬಿಡುತ್ತಿದ್ದೆವು. ಆದರೆ, ಅವರೊಂದಿಗೆ ಹಾಡುತ್ತಿರಲಿಲ್ಲ ಎಂದು ಹೇಳಿದ್ದರು' ಎಂದು ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ಗೀತರಚನೆಕಾರ ಸಮೀರ್ ಅಂಜಾನ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT