ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣದಲ್ಲಿ ರೈತರ ಮೇಲೆ ನಡೆದ ಲಾಠಿಚಾರ್ಜ್‌ 2ನೇ ಜಲಿಯನ್‌ವಾಲಾಬಾಗ್‌: ಶಿವಸೇನಾ

Last Updated 30 ಆಗಸ್ಟ್ 2021, 7:38 IST
ಅಕ್ಷರ ಗಾತ್ರ

ಮುಂಬೈ: ಹರಿಯಾಣ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿರುವುದನ್ನು ‘ಎರಡನೇ ಜಲಿಯನ್‌ವಾಲಾ ಬಾಗ್‌‘ ಎಂದು ಕರೆದಿರುವ ಶಿವಸೇನಾ, ಇಂಥ ಕೃತ್ಯಕ್ಕೆ ಕಾರಣವಾದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್ ನೇತೃತ್ವದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದೆ.

‘ಪ್ರಧಾನಿ ನರೇಂದ್ರ ಮೋದಿಯವರು ಅಮೃತ್‌ಸರದಲ್ಲಿ ನವೀಕೃತ ಜಲಿಯನ್‌ವಾಲಾಬಾಗ್‌ ಸಂಕೀರ್ಣವನ್ನು ಉದ್ಘಾಟಿಸಿದ್ದಾರೆ. ಅದೇ ಸಮಯದಲ್ಲಿ ಹರಿಯಾಣದಲ್ಲಿ ಜಲಿಯಾನ್‌ವಾಲಾಬಾಗ್‌ ಹಿಂಸಾಚಾರ ರೀತಿಯ ಘಟನೆ ನಡೆಯುತ್ತಿದೆ‘ ಎಂದು ತನ್ನ ಪಕ್ಷದ ಮುಖವಾಣಿ ‘ಸಾಮ್ನಾ‘ದ ಸಂಪಾದಕೀಯದಲ್ಲಿ ಹೇಳಿದೆ.

‘ಸರ್ಕಾರವು ಬಿತ್ತಿದ ಕ್ರೌರ್ಯದ ಬೀಜಗಳು ಹುಳಿ ಹಣ್ಣುಗಳನ್ನು ನೀಡುತ್ತವೆ. ಇದು ಖಚಿತವಾಗಿದೆ. ಮನೋಹರ್ ಲಾಲ್ ಖಟ್ಟರ್ ಸರ್ಕಾರಕ್ಕೆ ಅಧಿಕಾರದಲ್ಲಿ ಉಳಿಯಲು ಯಾವುದೇ ಹಕ್ಕಿಲ್ಲ‘ ಎಂದು ಹೇಳಿದೆ.

ಪೊಲೀಸರು ನಡೆಸಿರುವ ಲಾಠಿಚಾರ್ಜ್ ಘಟನೆ, ರೈತರು ಸರ್ಕಾರದ ವಿರುದ್ಧ ದಂಗೆಯೇಳುವಂತೆ ಮಾಡಬಹುದು. ಈ ದಾಳಿಯಿಂದ ಹರಿದ ರಕ್ತದ ಪ್ರತಿ ಹನಿಗೂ ಅವರು ಸೇಡು ತೀರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT