ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಜಾತಿ ಗಣತಿಗೆ ಚಾಲನೆ: ಇದೊಂದು ‘ಐತಿಹಾಸಿಕ ಹೆಜ್ಜೆ’ ತೇಜಸ್ವಿ ಯಾದವ್

ಇದೊಂದು ‘ಐತಿಹಾಸಿಕ ಹೆಜ್ಜೆ’: ತೇಜಸ್ವಿ ಯಾದವ್‌
Last Updated 7 ಜನವರಿ 2023, 12:48 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): ಬಿಹಾರದಲ್ಲಿ ಜಾತಿ ಗಣತಿ ಪ್ರಕ್ರಿಯೆಯು ಶನಿವಾರ ಆರಂಭವಾಯಿತು. ಈ ಪ್ರಕ್ರಿಯೆಯನ್ನು ‘ಐತಿಹಾಸಿಕ ಹೆಜ್ಜೆ’ ಎಂದು ರಾಜ್ಯದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರು ಕರೆದಿದ್ದಾರೆ.

‘ಬಿಹಾರದಲ್ಲಿ ಜಾತಿ ಗಣತಿಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಮಹಾಘಟಬಂಧನ ಸರ್ಕಾರ ತೆಗೆದುಕೊಂಡಿರುವ ಐತಿಹಾಸಿಕ ಹೆಜ್ಜೆ ಇದು. ಈ ಗಣತಿಯು ಸಂಪೂರ್ಣವಾದರೆ, ಜನರಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಕಲ್ಯಾಣ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಇದು ವೈಜ್ಞಾನಿಕ ಅಂಕಿಅಂಶ ಒದಗಿಸುತ್ತದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮಹಾಘಟಬಂಧನದ ಎಲ್ಲಾ ಸದಸ್ಯಪಕ್ಷಗಳೂ ಈ ಗಣತಿಯ ಪರ ಇವೆ. ಆದರೆ ಬಿಜೆಪಿ ಮಾತ್ರ ಇದರ ವಿರುದ್ಧ ಇದೆ. ಬಿಜೆಪಿಯು ಬಡವರ ವಿರೋಧಿ ಪಕ್ಷ. ಹಾಗಾಗಿ ಅದು ಸದಾ ಜಾತಿ ಗಣತಿಯನ್ನು ವಿರೋಧಿಸುತ್ತದೆ ಎಂದರು.

ಬಿಹಾರದಲ್ಲಿ ಎರಡು ಹಂತಗಳಲ್ಲಿ ನಡೆಯುವ ಜಾತಿ ಗಣತಿಯು ಇದೇ ಮೇ ತಿಂಗಳಲ್ಲಿ ಮುಕ್ತಾಯವಾಗಲಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ₹500 ಕೋಟಿ ವ್ಯಯಿಸಲಿದೆ. ಈ ಗಣತಿಯಿಂದ ರಾಜ್ಯದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಇತ್ತೀಚೆಗಷ್ಟೇ ರಾಜ್ಯದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT