ಒಟ್ಟಾರೆಯಾಗಿ ದೇಶದ ವಿವಿಧ ಹೈಕೋರ್ಟ್ಗಳಲ್ಲಿ 2016ರಲ್ಲಿ40,28,591 ಪ್ರಕರಣಗಳು ಬಾಕಿ ಇದ್ದವು. ಅವುಗಳ ಸಂಖ್ಯೆಯಲ್ಲಿ ಜುಲೈ 29ರ ವೇಳೆಗೆ ಶೇ 50 ರಷ್ಟು ಏರಿಕೆಯಾಗಿ,59,55,907ಕ್ಕೆ ತಲುಪಿವೆ. 2016ರಿಂದ ಈ ವರ್ಷದ ಜುಲೈ 29ರ ಅವಧಿಯಲ್ಲಿ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿಯೂ ಇತ್ಯರ್ಥವಾಗದ ಪ್ರಕರಣಗಳಲ್ಲಿ ಶೇ 50ರಷ್ಟು ಏರಿಕೆಯಾಗಿದೆ ಎಂದು ಮತ್ತೊಂದು ಪ್ರಶ್ನೆಗೆ ಕಿರಣ್ ಪ್ರತಿಕ್ರಿಯಿಸಿದ್ದಾರೆ.