ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾನೂನಗಳ ರದ್ದು ಏಕೆ ಸಾಧ್ಯವಿಲ್ಲ ಎಂದು ರೈತರಿಗೆ ತಿಳಿಸಲಿ: ರಾಕೇಶ್ ಟಿಕಾಯತ್

Last Updated 31 ಜನವರಿ 2021, 4:24 IST
ಅಕ್ಷರ ಗಾತ್ರ

ಗಾಜಿಯಾಬಾದ್‌: ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಏಕೆ ಬಯಸುವುದಿಲ್ಲ ಎಂದು ರೈತರಿಗೆ ವಿವರಿಸಲು ಭಾರತೀಯ ಕಿಸಾನ್‌ ಒಕ್ಕೂಟದ (ಬಿಕೆಯು) ವಕ್ತಾರ ರಾಕೇಶ್‌ ಟಿಕಾಯತ್‌ ಶನಿವಾರ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಆದರೆ ಅವರು 'ಸರ್ಕಾರವು ಪ್ರಪಂಚದ ಮುಂದೆ ತಲೆ ಬಾಗಲು ಬಿಡುವುದಿಲ್ಲ' ಎಂದು ಭರವಸೆ ನೀಡಿದ್ದಾರೆ.

ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿರಲು ಅಚಲವಾಗಿರುವ ಸರ್ಕಾರದ ತೀರ್ಮಾನವೇನು? ಎಂದಿರುವ ಟಿಕಾಯತ್, ಏನೇ ಆದರೂ ತಾವು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ನಿಲ್ಲಿಸುವುದಿಲ್ಲ. ಸ್ಥಳದಿಂದ ತೆರಳುವುದಕ್ಕಿಂತ ಆತ್ಮಹತ್ಯೆಯನ್ನಾದರೂ ಮಾಡಿಕೊಳ್ಳುತ್ತೇನೆ ಎಂದು ಸರ್ಕಾರಕ್ಕೆ ಸವಾಲೆಸೆದು ಭಾವನಾತ್ಮಕ ಭಾಷಣ ಮಾಡಿದ್ದಾರೆ.

'ಸರ್ಕಾರವು ಏಕೆ ಕೃಷಿ ಕಾನೂನುಗಳನ್ನು ರದ್ದುಪಡಿಸುವುದಿಲ್ಲ ಎನ್ನುವುದಕ್ಕೆ ಸೂಕ್ತ ಕಾರಣವನ್ನು ರೈತರಿಗೆ ಹೇಳಬಹುದು ಮತ್ತು ನಾವು (ರೈತರು) ಪಂಚಾಯತ್ ವ್ಯವಸ್ಥೆಯನ್ನು ನಂಬುವ ಜನರಾಗಿದ್ದೇವೆ. ಪ್ರಪಂಚದ ಮುಂದೆ ನಾಚಿಕೆಯಿಂದ ಸರ್ಕಾರ ತಲೆ ಬಾಗಲು ನಾವು ಎಂದಿಗೂ ಬಿಡುವುದಿಲ್ಲ. ನಾವು ಸರ್ಕಾರದೊಂದಿಗೆ ಸೈದ್ಧಾಂತಿಕ ಹೋರಾಟವನ್ನು ಹೊಂದಿದ್ದೇವೆ, ಹೊರತು ಕೋಲುಗಳು ಮತ್ತು ಬಂದೂಕುಗಳಿಂದ ಹೋರಾಡುವುದಲ್ಲ ಅಥವಾ ಅವರಿಂದ ನಿಗ್ರಹಿಸಲ್ಪಡುವುದಲ್ಲ. ಹೊಸ ಕಾನೂನುಗಳನ್ನು ರದ್ದುಪಡಿಸಿದಾಗ ಮಾತ್ರವೇ ರೈತರು ಮನೆಗೆ ಮರಳುತ್ತಾರೆ' ಎಂದು ಬಿಕೆಯು ರಾಷ್ಟ್ರೀಯ ವಕ್ತಾರರು ತಿಳಿಸಿದ್ದಾರೆ.

ದೆಹಲಿ ಪೂರ್ವ ಗಡಿಯಲ್ಲಿ ಪ್ರತಿಭಟನಾ ಸ್ಥಳವನ್ನು ತಲುಪುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಗ್ರಾಮಸ್ಥರೊಂದಿಗೆ ಭಾರತೀಯ ಕಿಸಾನ್ ಯೂನಿಯನ್‌ನ ದಿವಂಗತ ಅಧ್ಯಕ್ಷ ಮಹೇಂದ್ರ ಸಿಂಗ್ ಟಿಕಾಯತ್ ಅವರ ಕಿರಿಯ ಮಗ ವಾಗ್ದಾನ ನೀಡಿದ್ದಾರೆ. ಕೆಲವರು ನೀರು ಮತ್ತು ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ಇತರರು ಮಜ್ಜಿಗೆಯೊಂದಿಗೆ ತೆರಳುವ ಮೂಲಕ ಪ್ರತಿಭಟನಾಕಾರರಿಗೆ ಸಾಂಕೇತಿಕ ಬೆಂಬಲ ನೀಡಿದರು.

ಟಿಕಾಯತ್‌ ಅವರ ಬೆಳೆಯುತ್ತಿರುವ ಶಕ್ತಿಯನ್ನು ಕಂಡು ಹೆಚ್ಚಿನ ರಾಜಕಾರಣಿಗಳು ಅವರ ಹಿಂದೆ ಬಿದ್ದಿದ್ದಾರೆ ಮತ್ತು ಮತ್ತು ಪ್ರತಿಭಟನಾ ಸ್ಥಳದಲ್ಲಿ ಅವರನ್ನು ಭೇಟಿಯಾಗುತ್ತಿದ್ದಾರೆ. ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಭುಗಿಲೆದ್ದ ಹಿಂಸಾಚಾರದ ನಂತರ ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಬಿಕೆಯು ನೇತೃತ್ವದ ಪ್ರತಿಭಟನೆ ಭುಗಿಲೆದ್ದಂತೆ ಕಂಡುಬಂತು, ಆದರೆ ಮುಜಫರ್‌ನಗರದಲ್ಲಿ ಶನಿವಾರ ರೈತರ 'ಮಹಾಪಂಚಾಯತ್' ನಂತರ ಹೆಚ್ಚಿನ ಪ್ರತಿಭಟನಾಕಾರರು ಸೇರಿಕೊಂಡಿದ್ದಾರೆ.

ಪ್ರತಿಭಟನಾ ನಿರತ ರೈತರನ್ನುದ್ದೇಶಿಸಿ ಮಾತನಾಡಿದ ಟಿಕಾಯತ್, ರೈತರು ಗಾಂಧಿವಾದಿ ಅಹಿಂಸೆಯ ತತ್ವವನ್ನು ನಂಬುತ್ತಾರೆ ಮತ್ತು ಸಂವಿಧಾನದ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ ಎಂದ ಅವರು, ಶಾಂತಿ ಕಾಪಾಡಿಕೊಳ್ಳಲು ಎಲ್ಲರಿಗೂ ಮನವಿ ಮಾಡಿದರು. 'ಪೊಲೀಸರು ಲಾಠಿ ಚಾರ್ಜ್ ಮಾಡಿದರೂ ರೈತರು ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ರಾಜಕೀಯ ಪಕ್ಷಗಳ ಗೂಂಡಾಗಳು ಅವರನ್ನು ಮುಟ್ಟುವ ಧೈರ್ಯ ಮಾಡಿದರೆ, ರೈತರು ಅಥವಾ ಅವರ ಟ್ರ್ಯಾಕ್ಟರುಗಳು ಈ ಸ್ಥಳದಿಂದ ತೆರಳುವುದೇ ಇಲ್ಲ' ಎಂದು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT