ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್ ಆಡಳಿತದ ಮಾದರಿ ದೇಶದಾದ್ಯಂತ ಬೇಕು: ಎಎಪಿ ಸೇರಿದ ಬಿ.ಭಾಸ್ಕರ್ ರಾವ್

Last Updated 4 ಏಪ್ರಿಲ್ 2022, 9:08 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಅರವಿಂದಕೇಜ್ರಿವಾಲ್ ಅವರ‌ ಆಡಳಿತದ ಮಾದರಿಯ ಅಗತ್ಯ ಇದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಬಿ. ಭಾಸ್ಕರ್ ರಾವ್ ಅಭಿಪ್ರಾಯಪಟ್ಟರು.

ನವದೆಹಲಿಯಲ್ಲಿ ಸೋಮವಾರ ಆಮ್ ಆದ್ಮಿ ಪಕ್ಷ (ಎಎಪಿ) ಸೇರ್ಪಡೆ ಬಳಿಕ ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದ ಅವರು, ಎಎಪಿ ಮಾದರಿ ಆಡಳಿತ ಎಲ್ಲೆಡೆ ಇರಬೇಕು ಎಂಬ ಅಭಿಲಾಷೆಯೊಂದಿಗೆ‌ ನಾನು ನೌಕರಿಗೆ ರಾಜೀನಾಮೆ ನೀಡಿ ಪಕ್ಷ‌ ಸೇರಿದ್ದೇನೆ ಎಂದರು.

'ಪೊಲೀಸ್ ಇಲಾಖೆಯಲ್ಲಿ ಸತತ 32 ವರ್ಷ ಕೆಲಸ ಮಾಡಿದ್ದರೂ ದೆಹಲಿಯನ್ನು ಹತ್ತಿರದಿಂದ ನೋಡಿರಲಿಲ್ಲ. ಕೆಲವು ದಿನಗಳ ಹಿಂದೆ ಇಲ್ಲಿನ ಸರ್ಕಾರಿ ಶಾಲೆ‌ಯ ಗುಣಮಟ್ಟ ನೋಡಿ, ಜನಸಾಮಾನ್ಯರಿಗೆ‌ ದೊರೆತ ಭದ್ರತೆ ನೋಡಿ ಪಕ್ಷ ಸೇರಿದ್ದೇನೆ' ಎಂದು ಅವರು ತಿಳಿಸಿದರು.

'ಕೇಜ್ರಿವಾಲ್ ಅವರ ಕಾರ್ಯವೈಖರಿ, ವಿಕೇಂದ್ರೀಕರಣ ನೀತಿ, ಜನಸಾಮಾನ್ಯರ ಜೀವನದಲ್ಲಿ ಬದಲಾವಣೆ‌ ತಂದಿದ್ದನ್ನು ನೋಡಿದರೆ, ದೇಶದೆಲ್ಲೆಡೆ ಆ ವ್ಯವಸ್ಥೆ ಇರಬೇಕು ಎಂಬುದು ನಮ್ಮ ಆಶಯ'. ಕರ್ನಾಟಕ ಪ್ರಗತಿಶೀಲ ರಾಜ್ಯ. ಆದರೂ ಅಲ್ಲಿ ಉತ್ತಮ ಆಡಳಿತ ಇಲ್ಲ. ಆಡಳಿತದಲ್ಲಿ ಬದಲಾವಣೆ ಬಂದಲ್ಲಿ ಒಳ್ಳೆಯದು. ವಿಶ್ವಸಂಸ್ಥೆಯ ಪ್ರಗತಿಶೀಲ, ಸ್ವಚ್ಛ ಆಡಳಿತದ ಸರ್ಕಾರಗಳ ಪಟ್ಟಿಯಲ್ಲಿ ದೆಹಲಿ ಹಾಗೂ ಎಎಪಿ ಇದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ:

ಬಡತನ ರೇಖೆಗಿಂತ ಕಡಿಮೆ ಇರುವ ಜನರ‌ ಅಭ್ಯುದಯ ಮುಖ್ಯ. ಸರ್ಕಾರ ಜನರಿಗೆ‌ ಹತ್ತಿರ ಇರಬೇಕು. ಖಾಸಗಿ ಸಂಸ್ಥೆಗಳು ಕೆಲಸ ಮಾಡುವ ರೀತಿಯಲ್ಲಿ ‌ಮನೆ ಬಾಗಿಲಿಗೆ ‌ಸೇವೆ ಒದಗಿಸಬೇಕು. ಕೇಜ್ರಿವಾಲ್ ಅವರ ಶಿಕ್ಷಣ, ‌ರಾಜಕಾರಣದ ಮಾದರಿ ಎಲ್ಲೆಡೆ ಪಸರಿಸಬೇಕು. ಗ್ರಾಮ ಪಂಚಾಯಿತಿಯಿಂದ ವಿಧಾನಸಭೆ ತನಕ ಇಂಥ ಸರ್ಕಾರ ಇದ್ದರೆ ಸೂಕ್ತ. ಜನರಿಗೆ ಗೌರವ ದೊರೆಯಬೇಕು. ಎಎಪಿ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಬೇಕು ಎಂಬ ಬಯಕೆ ಜನರದ್ದಾಗಿದೆ. ಸಣ್ಣ ಪ್ರಮಾಣದಲ್ಲಿ ಆರಂಭವಾಗಿರುವ ಈ ಪಕ್ಷ‌ ಹೆಮ್ಮರವಾಗಲಿದೆ ಎಂಬ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜ್ಞಾನದ ರಾಜಧಾನಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಎಲ್ಲ ಸೌಲಭ್ಯಗಳು ದೊರೆಯಬೇಕು. ಇಲ್ಲಿನ ಸರ್ಕಾರ ಜಾರಿಗೆ ತಂದಿರುವ ನೀತಿ ಅಲ್ಲೂ ಜಾರಿಯಾಗಬೇಕಿದೆ‌‌ ಎಂದು ಅವರು ಹೇಳಿದರು.

ಎಎಪಿ ರಾಜ್ಯ ಘಟಕದ‌ ಅಧ್ಯಕ್ಷ ಪ್ರಥ್ವಿ ಆರ್. ರೆಡ್ಡಿ, ವಿಜಯ ಶಾಸ್ತ್ರಿಮಠ, ಮೋಹನ ದಾಸರಿ, ಎಂ.ಅರವಿಂದ್, ರಾಜು ಟೋಪಣ್ಣವರ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT