ಶನಿವಾರ, ಜುಲೈ 2, 2022
25 °C

ವಿಮಾನಗಳಿಗೆ ಹಕ್ಕಿ, ಪ್ರಾಣಿಗಳ ಡಿಕ್ಕಿ ಸಂಖ್ಯೆ 2021ರಲ್ಲಿ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ(ಪಿಟಿಐ): ಕೊರೊನಾ ಕಾರಣಕ್ಕೆ 2021ರ ಸಾಲಿನಲ್ಲಿ ವಿಮಾನಗಳ ಹಾರಾಟ ಸಂಖ್ಯೆಯಲ್ಲಿ ಗಣನೀಯ ಇಳಿಕೆಯ ಹೊರತಾಗಿಯೂ, ಭಾರತದ ವಿಮಾನ ನಿಲ್ದಾಣಗಳಲ್ಲಿ ಹಕ್ಕಿಗಳು ಮತ್ತು ಪ್ರಾಣಿಗಳು ವಿಮಾನಗಳಿಗೆ ಡಿಕ್ಕಿ ಹೊಡೆದ ಪ್ರಕರಣಗಳು ಏರಿಕೆಯಾಗಿವೆ.  

ಪ್ರಾಣಿಗಳು ಮತ್ತು ಹಕ್ಕಿಗಳ ಡಿಕ್ಕಿ ಪ್ರಕರಣಗಳು ವಿಮಾನಗಳ ಕಾರ್ಯಾಚರಣೆಗೆ ಬಹುದೊಡ್ಡ ಭೀತಿಯಾಗಿವೆ. 2020ರ ಸಾಲಿಗೆ ಹೋಲಿಸಿದರೆ, 2021ರಲ್ಲಿ 1466 ಹಕ್ಕಿಗಳು ವಿಮಾನಗಳಿಗೆ ಡಿಕ್ಕಿ ಹೊಡೆದ ಪ್ರಕರಣಗಳು ನಡೆದಿವೆ. ಇದೇ ವೇಳೆ 27 ಪ್ರಾಣಿಗಳು ವಿಮಾನಗಳಿಗೆ ಡಿಕ್ಕಿ ಹೊಡೆದಿವೆ ಎಂದು ನಾಗರಿಕ ವಿಮಾನಯಾನದ ನಿರ್ದೇಶನಾಲಯ(ಡಿಜಿಸಿಎ)ದ ದತ್ತಾಂಶದಲ್ಲಿ ಉಲ್ಲೇಖಿಸಲಾಗಿದೆ.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು