ನೆರೆ ರಾಜ್ಯಗಳಿಂದ ಗೋವುಗಳ ಖರೀದಿ: ಗೋವಾ ಸಿ.ಎಂ ಸಾವಂತ್
ಪಣಜಿ: ರಾಜ್ಯ ಎದುರಿಸುತ್ತಿರುವ ಗೋ ಮಾಂಸದ ಕೊರತೆಯನ್ನು ನಿವಾರಿಸುವ ಸಲುವಾಗಿ ನೆರೆ ರಾಜ್ಯಗಳಿಂದ ಗೋವುಗಳನ್ನು ಖರೀದಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ಹೇಳಿದ್ದಾರೆ.
ಕರ್ನಾಟಕದಿಂದ ಗೋವಾಕ್ಕೆ ಗರಿಷ್ಠ ಪ್ರಮಾಣದ ಮಾಂಸ ಪೂರೈಕೆಯಾಗುತ್ತದೆ. ಕರ್ನಾಟಕ ಈಗ ಗೋಹತ್ಯೆಯನ್ನು ನಿಷೇಧಿಸಿರುವ ಕಾರಣ ಗೋವಾ ಮಾಂಸದ ಕೊರತೆಯನ್ನು ಎದುರಿಸುತ್ತಿದೆ.
‘ಗೋ ಮಾಂಸವನ್ನು ಪೂರೈಕೆ ಮಾಡುವ ಏಜೆಂಟರು ಬೇಡಿಕೆಗೆ ತಕ್ಕಷ್ಟು ಮಾಂಸ ಖರೀದಿಸಲು ವಿಫಲರಾದರೆ, ಅವರು ನೆರೆ ರಾಜ್ಯಗಳಿಂದ ಗೋವುಗಳನ್ನು ಖರೀದಿಸಬಹುದು. ಅವುಗಳನ್ನು ಗೋವಾ ಮೀಟ್ ಕಾಂಪ್ಲೆಕ್ಸ್ ಲಿ. (ಜಿಎಂಸಿಎಲ್)ನಲ್ಲಿ ವಧೆ ಮಾಡಬಹುದು’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಇಲ್ಲಿ ತಿಳಿಸಿದರು.
ಜಿಎಂಸಿಎಲ್ನ ಕಸಾಯಿಖಾನೆ ಪಣಜಿಯಿಂದ 45 ಕಿ.ಮೀ. ದೂರದಲ್ಲಿನ ಉಸ್ಗಾಂವ್ ಗ್ರಾಮದಲ್ಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.