ಗುರುವಾರ , ಜೂನ್ 30, 2022
22 °C

110 ಭ್ರಷ್ಟಾಚಾರ ವಿರೋಧಿ ದೂರುಗಳನ್ನು ಸ್ವೀಕರಿಸಿದ ‘ಲೋಕಪಾಲ‘

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ 2020–21ನೇ ಸಾಲಿನಲ್ಲಿ ನಾಲ್ವರು ಸಂಸದರು ಸೇರಿದಂತೆ 110 ಮಂದಿ ವಿರುದ್ಧ ಭಷ್ಟ್ರಾಚಾರ ನಿಗ್ರಹ ಒಂಬುಡ್ಸಮನ್‌ ಲೋಕಪಾಲದಲ್ಲಿ ದೂರು ಸಲ್ಲಿಕೆಯಾಗಿದ್ದು, 2019–20ಕ್ಕೆ ಹೋಲಿಸಿದರೆ, ಈ ವರ್ಷದಲ್ಲಿ ದಾಖಲಾಗಿರುವ ದೂರಿನ ಪ್ರಮಾಣ ಶೇ 92ರಷ್ಟು ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಲೋಕಪಾಲ್‌ನಲ್ಲಿ 2019-20ರಲ್ಲಿ 1,427 ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿವೆ ಎಂದು ದೂರುಗಳು ಬಂದಿವೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಸ್ವೀಕರಿಸಿರುವ ದೂರುಗಳಲ್ಲಿ 57 ದೂರುಗಳು ಕೇಂದ್ರ ಸರ್ಕಾರದ ಗ್ರೂಪ್ ಎ ಅಥವಾ ಗ್ರೂಪ್ ಬಿ ಅಧಿಕಾರಿಗಳ ವಿರುದ್ಧ ದಾಖಲಾಗಿವೆ. 44 ದೂರುಗಳು ವಿವಿಧ ನಿಗಮ/ಮಂಡಳಿಗಳು/ ಸ್ವಾಯತ್ತ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿ ವಿರುದ್ಧ ಮತ್ತು ಐದು ದೂರುಗಳು ಇತರೆ ವಿಭಾಗದಲ್ಲಿ ದಾಖಲಾಗಿವೆ ಎಂದು ಲೋಕಪಾಲ ಕಚೇರಿಯ ಮಾಹಿತಿ ತಿಳಿಸಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2019 ರ ಮಾರ್ಚ್ 23 ರಂದು ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ಅವರಿಗೆ ಲೋಕಪಾಲ್‌ ಅಧ್ಯಕ್ಷರಾಗಿ ಪ್ರಮಾಣ ವಚನ ಬೋಧಿಸಿದರು. ಈ ಸಂಸ್ಥೆಗೆ, ಪ್ರಧಾನಿ ಸೇರಿದಂತೆ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ನೀಡಲಾಗಿದೆ. ಲೋಕಪಾಲ್ ಅವರ ಎಂಟು ಸದಸ್ಯರನ್ನು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು