ಶೇ.90ರಷ್ಟು ಸುರಕ್ಷತೆಯ ದೇಶಿಯ ಲಸಿಕೆ ಅಕ್ಟೋಬರ್‌ನಲ್ಲಿ ಲಭ್ಯ –ಬಯೋಲಾಜಿಕಲ್ ಇ

ನವದೆಹಲಿ: ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿಯಾದ ‘ಬಯೋಲಾಜಿಕಲ್-ಇ’ ತಯಾರಿಸಿರುವ ಲಸಿಕೆ ಬರುವ ಅಕ್ಟೋಬರ್‌ನಲ್ಲಿ ಮಾನವ ಬಳಕೆಗೆ ದೊರೆಯಲಿದೆ ಎಂದು ಕಂಪನಿಯ ಅಧಿಕೃತ ಮೂಲಗಳು ತಿಳಿಸಿವೆ.
ಕೋವಿಡ್ ಲಸಿಕೆ ತಯಾರಿಸಿದ ದೇಶಿಯ ಎರಡನೇ ಕಂಪನಿ ಇದಾಗಿದೆ. ಈಗಾಗಲೇ ಭಾರತ್ ಬಯೋಟೆಕ್ ಕಂಪನಿ ಕೋವ್ಯಾಕ್ಸಿನ್ ಲಸಿಕೆ ತಯಾರಿಸಿದೆ.
ಬಯೋಲಾಜಿಕಲ್-ಇ ಕಂಪನಿ ತಯಾರಿಸಿರುವ ಲಸಿಕೆಗೆ ಕೋಬ್ರಿವ್ಯಾಕ್ಸ್ ಎಂದು ಹೆಸರಿಡಲಾಗಿದೆ. ಈ ಲಸಿಕೆಯು ಶೇಕಡ 90ರಷ್ಟು ಸುರಕ್ಷಿತವಾಗಿದೆ. ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಮಾಡಿರುವ ಈ ಲಸಿಕೆಯ ಎರಡು ಡೋಸ್‌ಗಳ ಬೆಲೆ ₹250 ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಈ ಕೋವಿಡ್ ಲಸಿಕೆಯು ಮೊದಲ ಮತ್ತು ಎರಡನೇ ಹಂತದ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ನೀಡಿದ್ದು, ಇದೀಗ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಟ್ಟಿದೆ.
ಇದು ‘ಆರ್‌ಬಿಡಿ ಪ್ರೋಟೀನ್ ಸಬ್ ಯುನಿಟ್’ ಲಸಿಕೆಯಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
30 ಕೋಟಿ ಲಸಿಕಾ ಡೋಸ್‌ಗಳನ್ನು ಕಾಯ್ದಿರಿಸುವುದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಈ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಮುಂಗಡವಾಗಿ ₹1500 ಕೋಟಿಯನ್ನು ಕೇಂದ್ರ ಪಾವತಿಸಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.