ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಚಾಕೊಲೇಟ್ ಕದ್ದಿದ್ದಾಳೆ, ಆಕೆಯನ್ನು ಜೈಲಿಗೆ ಹಾಕಿ: ಠಾಣೆ ಮೆಟ್ಟಿಲೇರಿದ ಬಾಲಕ

Last Updated 18 ಅಕ್ಟೋಬರ್ 2022, 13:57 IST
ಅಕ್ಷರ ಗಾತ್ರ

ಬುರ್ಹಾನಪುರ (ಮಧ್ಯಪ್ರದೇಶ): ‘ಅಮ್ಮ ನನ್ನ ಚಾಕೊಲೇಟುಗಳನ್ನು ಕದ್ದಿದ್ದಾಳೆ. ಆಕೆಯನ್ನು ಜೈಲಿಗೆ ಹಾಕಿ’ ಎಂದು ತನ್ನ ತಾಯಿಯ ಮೇಲೆ ‘ಗಂಭೀರ’ ಆರೋಪ ಹೊರಿಸಿ ಮೂರು ವರ್ಷದ ಬಾಲಕ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

‘ನನ್ನ ತಾಯಿ ನನಗೆ ಚಾಕೊಲೇಟುಗಳನ್ನು ತಿನ್ನಲು ಬಿಡುವುದಿಲ್ಲ. ನನ್ನ ಕೆನ್ನೆಗೆ ಹೊಡೆದಿದ್ದಾಳೆ. ಆದ್ದರಿಂದ ಆಕೆಯನ್ನು ಜೈಲಿಗೆ ಹಾಕಿ’ ಎಂದು ಬುರ್ಹಾನಪುರ ದೆಡತಲಾಯಿ ಪೊಲೀಸ್‌ ಠಾಣೆಯಲ್ಲಿ ಬಾಲಕ ಭಾನುವಾರ ದೂರು ನೀಡಿದ್ದಾನೆ.

ವಿಡಿಯೊ ವೈರಲ್‌: ಬಾಲಕ ಸದ್ದಾಂ, ಪೊಲೀಸರಿಗೆ ದೂರು ನೀಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಬ್‌ ಇನ್ಸ್‌ಸ್ಪೆಕ್ಟರ್‌ ಪ್ರಿಯಾಂಕಾ ಅವರು ಬಾಲಕನ ದೂರು ಬರೆದುಕೊಂಡಿದ್ದಾರೆ. ದೂರಿನ ಪ್ರತಿಗೆ ಸಹಿ ಹಾಕುವಂತೆ ಪ್ರಿಯಾಂಕಾ ಅವರು ಬಾಲಕನಲ್ಲಿ ಹೇಳಿದ್ದಾರೆ. ಅದಕ್ಕೆ ಆತ ದೂರಿನ ಪ್ರತಿಯ ಮೇಲೆ ಕೆಲವು ಗೆರೆಗಳನ್ನು ಎಳೆದಿರುವ ದೃಶ್ಯವು ವಿಡಿಯೊದಲ್ಲಿದೆ. ತಾಯಿಯನ್ನು ಕೂಡಲೇ ಬಂಧಿಸುವುದಾಗಿಯೂ ಪ್ರಿಯಾಂಕ ಅವರು ಬಾಲಕನಿಗೆ ಭರವಸೆ ನೀಡಿದ್ದಾರೆ.

‘ಚಾಕೊಲೇಟುಗಳನ್ನು ಕೊಡುವಂತೆ ಮಗ ಬಹಳ ಹಠ ಮಾಡುತ್ತಿದ್ದ. ಆದ್ದರಿಂದ ಮಗನ ಕೆನ್ನೆಗೆ ಪತ್ನಿಯು ಮೆತ್ತಗೆ ಹೊಡೆದಿದ್ದಾಳೆ. ಜೊತೆಗೆ, ಸ್ನಾನವಾದ ಬಳಿಕ ಹಣೆಗೆ ‘ಟೀಕಾ’ (ತಿಲಕ) ಇಟ್ಟಿಕೊಳ್ಳಲು ಮಗ ಹಠಮಾಡಿದ. ಅದಕ್ಕಾಗಿಯೂ ನನ್ನ ಪತ್ನಿ ಬೈದಳು. ತಾಯಿಯ ವರ್ತನೆಯಿಂದ ಮಗ ಬಹಳ ಬೇಸರಗೊಂಡಿದ್ದ. ನಂತರ ಪೊಲೀಸ್‌ ಬಳಿ ಕರೆದುಕೊಂಡು ಹೋಗುವಂತೆ ಹಠ ಮಾಡಿದ. ಅದಕ್ಕಾಗಿ ಠಾಣೆಗೆ ಕರೆದುಕೊಂಡು ಹೋದೆ’ ಎಂದು ಬಾಲಕನ ತಂದೆ ತಿಳಿಸಿದರು.

ಬಾಲಕನೊಂದಿಗೆ ಪ್ರಿಯಾಂಕ ಅವರು ನಡೆದುಕೊಂಡ ರೀತಿಯ ಬಗ್ಗೆಬುರ್ಹಾನಪುರ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಭಯ ಇಲ್ಲದೆ ಯಾರು ಬೇಕಾದರು ಪೊಲೀಸ್‌ ಠಾಣೆಗೆ ಬರಬಹುದು ಎನ್ನುವುದನ್ನು ಈ ಘಟನೆ ಸಾಕ್ಷೀಕರಿಸಿದೆ ಎಂದಿದ್ದಾರೆ.

‘ದೀಪಾವಳಿಗೆ ತುಂಬಾ ಚಾಕೊಲೇಟ್‌ ಕೊಡುವೆ’
ವಿಡಿಯೊ ವೈರಲ್‌ ಆಗುತ್ತಿದ್ದಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್‌ ಮಿಶ್ರಾ ಅವರು ವಿಡಿಯೊ ಕಾಲ್‌ ಮುಖಾಂತರ ಮಂಗಳವಾರ ಬಾಲಕನೊಂದಿಗೆ ಮಾತನಾಡಿದರು. ದೀಪಾವಳಿ ಹಬ್ಬಕ್ಕೆ ತುಂಬಾ ಚಾಕೊಲೇಟುಗಳನ್ನು ಹಾಗೂ ಸೈಕಲ್‌ವೊಂದನ್ನು ನೀಡುವುದಾಗಿ ಅವರು ಬಾಲಕನಿಗೆ ಭರವಸೆ ನೀಡಿದರು.

ಬುರ್ಹಾನಪುರ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಅವರು ಬಾಲಕನ ತಂದೆಯೊಂದಿಗೆ ಮಾತನಾಡಿದರು. ‘ಮಗನಿಗೆ ಪೊಲೀಸರ ಬಗ್ಗೆ ಬಹಳ ಆಕರ್ಷಿತನಾಗಿದ್ದಾನೆ ಮತ್ತು ಅವರ ಬಗ್ಗೆ ತಿಳಿದುಕೊಳ್ಳಲು ಇಚ್ಚಿಸಿದ’ ಎಂದು ಬಾಲಕನ ತಂದೆ ಕುಮಾರ್‌ ಅವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT