ಬುಧವಾರ, ಡಿಸೆಂಬರ್ 8, 2021
25 °C

ಮಧ್ಯಪ್ರದೇಶ: ಸಿಗರೇಟಿನ ಹಣ ಕೇಳಿದ್ದಕ್ಕೆ ಮಾಲೀಕನನ್ನು ಹೊಡೆದು ಕೊಂದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹದೋಲ್, ಮಧ್ಯಪ್ರದೇಶ: ಸಿಗರೇಟ್‌ ಖರೀದಿಸಿದ ಬಳಿಕ ಹಣ ಪಾವತಿಸುವಂತೆ ಕೇಳಿದ್ದಕ್ಕೆ ಅಂಗಡಿ ಮಾಲೀಕನನ್ನು ನಾಲ್ವರು ಥಳಿಸಿ ಕೊಲೆ ಮಾಡಿದ ಘಟನೆ ಶಹದೋಲ್‌ನಲ್ಲಿ ನಡೆದಿದೆ.

ಜಿಲ್ಲಾ ಕೇಂದ್ರದಿಂದ 90 ಕಿಲೋಮೀಟರ್ ದೂರದಲ್ಲಿರುವ ಡಿಯೋಲಂಡ್ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಮೋನು ಖಾನ್, ಪಂಕಜ್ ಸಿಂಗ್, ವಿರಾಟ್ ಸಿಂಗ್ ಹಾಗೂ ಸಂದೀಪ್ ಸಿಂಗ್ ಎಂಬುವವರು ರಾತ್ರಿ 9ರ ಸುಮಾರಿಗೆ ಅರುಣ್ ಸೋನಿಯ ಎಂಬುವವರ ಅಂಗಡಿಯಲ್ಲಿ ಸಿಗರೇಟ್ ಕೇಳಿದ್ದಾರೆ. ಸಿಗರೇಟ್ ನೀಡಿದ ನಂತರ ಹಣ ಪಾವತಿಸಲು ಸೋನಿ ಕೇಳಿದಾಗ, ನಾಲ್ವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಮಾಲೀಕನ ಇಬ್ಬರು ಮಕ್ಕಳು ತಂದೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸೋನಿ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಸ್ವಲ್ಪ ಸಮಯದಲ್ಲೇ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಇನ್ನೊಬ್ಬ ಆರೋಪಿಯನ್ನು ಬಂಧಿಸಲು ಜಾಲ ಬೀಸಲಾಗಿದೆ ಎಂದು ಬೆಹರಿಯ ಪೊಲೀಸ್‌ ಅಧಿಕಾರಿ ಭವಿಷ್ಯ ಭಾಸ್ಕರ್ ತಿಳಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು