ಬುಧವಾರ, ಜೂನ್ 16, 2021
27 °C

ಕೋವಿಡ್‌: ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕಿ ಕಲಾವತಿ ಭುರಿಯಾ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಇಂದೋರ್‌: ‘ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕಿ ಕಲಾವತಿ ಭುರಿಯಾ (49) ಕೋವಿಡ್‌ನಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು’ ಎಂದು ಮೂಲಗಳು ತಿಳಿಸಿವೆ.

‘12 ದಿನಗಳ ಹಿಂದೆ ಕಲಾವತಿ ಅವರನ್ನು ಇಂದೋರ್‌ನ ಶಲ್ಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಕೋವಿಡ್‌ ಚಿಕಿತ್ಸೆ ನೀಡಲಾಗುತ್ತಿತ್ತು. ಕಲಾವತಿ ಅವರ ಶ್ವಾಸಕೋಶ ಶೇಕಡ 70ರಷ್ಟು ಸೋಂಕಿಗೆ ಒಳಾಗಾಗಿತ್ತು. ಅವರಿಗೆ ವೆಂಟಿಲೇಟರ್ ನೆರವು ನೀಡಲಾಗಿತ್ತು. ಅಲ್ಲದೆ ಅವರ ಸ್ಥಿತಿಯು ಪ್ರತಿನಿತ್ಯ ಕ್ಷೀಣಿಸುತ್ತಿತ್ತು. ಅವರನ್ನು ಉಳಿಸಲು ನಮಗೆ ಸಾಧ್ಯವಾಗಿಲ್ಲ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿವೇಕ್ ಜೋಶಿ ಅವರು ತಿಳಿಸಿದರು.

2018ರಲ್ಲಿ ಕಲಾವತಿ ಅವರು ಜೋಬತ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರು ಮಾಜಿ ಕೇಂದ್ರ ಸಚಿವ ಕಾಂತಿಲಾಲ್‌ ಭುರಿಯಾ ಅವರ ಸೋದರ ಸೊಸೆ.

ಇದನ್ನೂ ಓದಿ...ಕೋವಿಡ್ ನಿರ್ವಹಣೆ: ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆಗೆ ಚಿದಂಬರಂ ಆಗ್ರಹ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು