ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಅಂ.ರಾ ಯೋಗ ದಿನದಂದು ಕೋವಿಡ್-19 'ಲಸಿಕೆ ಮಹಾಭಿಯಾನ'ಕ್ಕೆ ಚಾಲನೆ

ಅಕ್ಷರ ಗಾತ್ರ

ಭೋಪಾಲ್‌: ಕೋವಿಡ್-19 ಪರಿಸ್ಥಿತಿಯ ನಿಯಂತ್ರಣ ಹಾಗೂ ಮುಂದೆ ಎದುರಾಗಬಹುದಾದ ಕೊರೊನಾವೈರಸ್‌ನ ಮೂರನೇ ಅಲೆಯಿಂದಪಾರಾಗಲು, ಅಂತರರಾಷ್ಟ್ರೀಯ ಯೋಗ ದಿನದಂದು (ಸೋಮವಾರ ಜೂನ್ 21) ʼಲಸಿಕೆ ಮಹಾಭಿಯಾನʼಕ್ಕೆ ಚಾಲನೆ ನೀಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.‌

ರಾಜ್ಯ ಸರ್ಕಾರ ನಾಳೆ (ಸೋಮವಾರ)10 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಹೊಂದಿದೆ ಎಂದೂ ಚೌಹಾಣ್‌ ಹೇಳಿದ್ದಾರೆ.

ʼಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಾಳೆ 'ಲಸಿಕೆ ಮಹಾಭಿಯಾನ' ಆರಂಭಿಸಲು ನಿರ್ಧರಿಸಿದ್ದೇವೆ.7,000 ಕೇಂದ್ರಗಳನ್ನು ತೆರೆಯಲಾಗಿದ್ದು, ಹತ್ತು ಲಕ್ಷ ಜನರಿಗೆ ಲಸಿಕೆ ಪೂರೈಸಲು ಶ್ರಮಿಸಲಾಗುವುದುʼ ಎಂದು ಹೇಳಿದ್ದಾರೆ.

ಮುಂದುವರಿದು, 'ಪಿಡುಗಿನಿಂದ ಹಾನಿಯಾಗದಂತೆ ನೋಡಿಕೊಳ್ಳಲುನಾವು ಸಮಯಕ್ಕೆ ಸರಿಯಾಗಿ ಪೂರ್ವಯೋಜಿತ ಕ್ರಮಗಳನ್ನು ಕೈಗೊಳ್ಳುವುದು (ಸಂಭಾವ್ಯ ಮೂರನೇ ಅಲೆಯ ಆರಂಭಕ್ಕೂ ಮುನ್ನ) ತುಂಬಾ ಮುಖ್ಯ' ಎಂದಿದ್ದಾರೆ.

ರಾಜ್ಯದ ಜನರುಮುಂದೆ ಬರಬೇಕು ಮತ್ತುಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿರುವ ಮುಖ್ಯಮಂತ್ರಿ, ಲಸಿಕೆ ಬಗೆಗಿನ ಊಹಾಪೋಹಗಳನ್ನು ಬದಿಗಿಟ್ಟು,ವೈಜ್ಞಾನಿಕ ಸತ್ಯಗಳನ್ನು ಪರಿಗಣಿಸಿ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT