ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ: ಏಳು ಜನರ ಸಾವು

Last Updated 30 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಟ್ರೇನಿಯಾ (ಕ್ರೊಏಷ್ಯಾ): ಮಂಗಳವಾರ ಕೇಂದ್ರ ಕ್ರೊಏಷ್ಯಾದಲ್ಲಿ ನಡೆದ ಪ್ರಭಲ ಭೂಕಂಪಕ್ಕೆ ಏಳು ಜನರು ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪಕ್ಕೆ ಹಲವು ಕಟ್ಟಡಗಳು ಕುಸಿದಿದ್ದು, ತೀವ್ರತೆಯು 6.3ರಷ್ಟಿತ್ತು ಎಂದು ಯುರೋಪಿಯನ್‌ ಮೆಡಿಟರೇನಿಯನ್‌ ಭೂಕಂಪ ಮಾಪನ ಕೇಂದ್ರವು ತಿಳಿಸಿದೆ. ಟ್ರೇನಿಯಾದಲ್ಲಿ ಸೋಮವಾರವಷ್ಟೇ 5.2 ತೀವ್ರತೆಯ ಭೂಕಂಪ ಸಂಭವಿಸಿತ್ತು. 25 ಸಾವಿರ ಜನರು ಇರುವ ಈ ನಗರದಲ್ಲಿ, ಮಂಗಳವಾರ ಸಂಭವಿಸಿದ ಭೂಕಂಪಕ್ಕೆ 12 ವರ್ಷದ ಬಾಲಕಿಯೊಬ್ಬರು ಮೃತಪಟ್ಟಿದ್ದಾಳೆ. 26 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿ ಇದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರವೂ, 4.7 ತೀವ್ರತೆಯ ಭೂಕಂಪ ಟ್ರೇನಿಯಾದಲ್ಲಿ ದಾಖಲಾಗಿದೆ. ‘ಬುಧವಾರ ಬೆಳಗ್ಗೆ ಮೂರನೇ ಮತ್ತು ನಾಲ್ಕನೇ ಭೂಕಂಪನ ಸಂಭವಿಸಿದೆ. ಇದೂ ಪ್ರಭಲವಾಗಿತ್ತು. ಜನರಲ್ಲಿ ಇನ್ನೂ ಭಯವಿದೆ’ ಎಂದು ಮೇಯರ್‌ ಡರಿಂಕೊ ಡಂಬೋವಿಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT