ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ | ನಾಲ್ವರು ನಕ್ಸಲರು ಶರಣು: ₹ 22 ಲಕ್ಷ ಬಹುಮಾನ ಪ್ಯಾಕೇಜ್ ಘೋಷಣೆ

₹ 22 ಲಕ್ಷ ಬಹುಮಾನ ಪ್ಯಾಕೇಜ್ ಘೋಷಣೆ
Last Updated 23 ಮಾರ್ಚ್ 2021, 10:43 IST
ಅಕ್ಷರ ಗಾತ್ರ

ನಾಗ್ಪುರ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಾಲ್ವರು ನಕ್ಸಲರು ಮಂಗಳವಾರ ಪೊಲೀಸರಿಗೆ ಶರಣಾಗಿದ್ದಾರೆ.

ಇವರನ್ನು ಹಿಡಿದುಕೊಟ್ಟವರಿಗೆ₹ 22 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಶರಣಾದ ನಕ್ಸಲರನ್ನು ಭಮ್ರಘಡ್‌ ಪ್ರದೇಶದ ಕಮಾಂಡರ್ ಅಗಿದ್ದ ದಿನೇಶ್ ಅಲಿಯಾಸ್ ದಯಾರಾಮ್ ನೈತಂ (28), ಸೆಕ್ಷನ್ 9ರ ಡೆಪ್ಯುಟಿ ಕಮಾಂಡರ್ ನಕುಲ್ ಅಲಿಯಾಸ್ ಸುಖ್‌ಲುರಾಮ್ ಮಾದ್ವಿ (35) ಮತ್ತು ಆತನ ಪತ್ನಿ, ಕಸನ್ಸೂರ್ ದಳಂನ ಭಾಗವಾಗಿದ್ದ ನೀಲಾ ಕುಮ್ರೆ (34) ಹಾಗೂ ಶರದ್ ಅಲಿಯಾಸ್ ರಮೇಶ್ ಆಟ್ಲಾ (26) ಎಂದು ಗುರುತಿಸಲಾಗಿದೆ.

ಶರಣಾದ ನಕ್ಸಲರು ಪೊಲೀಸರೊಂದಿಗೆ ನಡೆದ ಹಲವು ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಇವರ ವಿರುದ್ಧ ಅನೇಕ ಕೊಲೆಯಂತಹ ಗಂಭೀರ ಪ್ರಕರಣಗಳೂ ದಾಖಲಾಗಿವೆ.

ಗಡ್ಚಿರೋಲಿಯಲ್ಲಿ 2019ರಿಂದ 2021ರ ಅವಧಿಯಲ್ಲಿ 37 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT