ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಭಾರಿ ಮಳೆಯಿಂದ ಪ್ರವಾಹ, ರಕ್ಷಣೆಗೆ ಎನ್‌ಡಿಆರ್‌ಎಫ್‌ ನಿಯೋಜನೆ

Last Updated 28 ಸೆಪ್ಟೆಂಬರ್ 2021, 15:17 IST
ಅಕ್ಷರ ಗಾತ್ರ

ಲಾತೂರ್‌ (ಪಿಟಿಐ): ಮಹಾರಾಷ್ಟ್ರದ ಲತೂರ್‌ನಲ್ಲಿ ದಿನವಿಡೀ ಸುರಿಯುತ್ತಿರುವ ಮಳೆಯಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು ಬ್ಯಾರೇಜ್‌ಗಳು, ಗ್ರಾಮಗಳು ಮತ್ತು ನದಿಯ ದಡದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಎನ್‌ಡಿಆರ್‌ಎಫ್‌ ತಂಡ, ಹೆಲಿಕಾಪ್ಟರ್‌ ಮತ್ತು ದೋಣಿಗಳನ್ನು ಮಂಗಳವಾರ ನಿಯೋಜಿಸಲಾಗಿದೆ.

ಸರ್ಸಾ ಗ್ರಾಮದಲ್ಲಿ ಮಂಜರಾ ನದಿಯ ದಡದಲ್ಲಿ ಸಿಲುಕಿದ್ದ ಸುಮಾರು 40 ಜನರಲ್ಲಿ 20 ಮಂದಿಯನ್ನು ದೋಣಿಯಲ್ಲಿ ರಕ್ಷಿಸಲಾಗಿದೆ. ಉಳಿದ 15 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೇನಾಪುರ ತಹಸಿಲ್‌ನ ದಿಗೋಲ್ ದೇಶಮುಖ ಪ್ರದೇಶದಲ್ಲಿ ನದಿ ಪಾತ್ರದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದೆ ಎಂದೂ ಅವರು ಹೇಳಿದರು.

ಘನಸರಗಾಂವ್‌ ಗ್ರಾಮದ ಅಣೆಕಟ್ಟು ಪ್ರದೇಶದಲ್ಲಿ ರಾಜ್ಯದ ನೀರಾವರಿ ಇಲಾಖೆಯ ಮುವರು ಉದ್ಯೋಗಿಗಳು ಸಿಲುಕಿಕೊಂಡಿದ್ದು ಅವರ ರಕ್ಷಣೆಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌) ತಂಡ ಹಾಗೂ ಒಂದು ಹೆಲಿಕಾಪ್ಟರ್‌ ಅನ್ನು ಸ್ಥಳಕ್ಕೆ ತರಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಸಾಕೇಬ್‌ ಉಸ್ಮಾನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT