ಶನಿವಾರ, ಮಾರ್ಚ್ 25, 2023
30 °C

ಮಹಾರಾಷ್ಟ್ರ: ಲಸಿಕೆ ಪಡೆಯದಿದ್ದರೆ ಠಾಣೆ ಪಾಲಿಕೆ ಸಿಬ್ಬಂದಿಗೆ ವೇತನ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಠಾಣೆ, ಮಹಾರಾಷ್ಟ್ರ: ಒಂದು ಡೋಸ್‌ ಲಸಿಕೆಯನ್ನೂ ಪಡೆಯದ ನೌಕರರಿಗೆ ವೇತನ ನೀಡುವುದಿಲ್ಲ ಎಂದು ಮಹಾರಾಷ್ಟ್ರದ ಠಾಣೆ ಮಹಾನಗರ ಪಾಲಿಕೆಯು (ಟಿಎಂಸಿ) ತಿಳಿಸಿದೆ.

ಪಾಲಿಕೆ ಆಯುಕ್ತ ಡಾ.ವಿಪಿನ್‌ ಶರ್ಮಾ ಮತ್ತು ಮೇಯರ್‌ ನರೇಶ್‌ ಮಹಾಸ್ಕೆ ಸೇರಿದಂತೆ ಸೋಮವಾರ ನಡೆದ ಪಾಲಿಕೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಕೋವಿಡ್‌ ಲಸಿಕೆಯ ಮೊದಲನೇ ಡೋಸ್‌ ಪಡೆಯದ ಪಾಲಿಕೆಯ ಉದ್ಯೋಗಿಗಳಿಗೆ ವೇತನ ನೀಡುವುದಿಲ್ಲ ಎಂದು ಸೋಮವಾರ ತಡರಾತ್ರಿ ಹೊರಡಿಸಿದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ. 

ನಿಗದಿಪಡಿಸಿದ ಸಮಯದಲ್ಲಿ ಲಸಿಕೆಯ ಎರಡನೇ ಡೋಸ್‌ ಪಡೆಯದವರಿಗೂ ಸಂಬಳ ಸಿಗುವುದಿಲ್ಲ. ಲಸಿಕೆ ಪಡೆದಾಗ ನೀಡಿರುವ ಪ್ರಮಾಣಪತ್ರಗಳನ್ನು ಅವರ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ತಿಂಗಳಾಂತ್ಯದ ವೇಳೆಗೆ ನಗರದಲ್ಲಿ ಲಸಿಕೆ ಹಾಕುವ ಸಂಪೂರ್ಣ ಗುರಿ ಮುಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾಸ್ಕೆ ಸುದ್ದಿಗಾರರಿಗೆ ತಿಳಿಸಿದರು. 

ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕಾ ಅಭಿಯಾನ ಕೈಗೊಳ್ಳುತ್ತಿದ್ದು ಮುಂಬೈನಲ್ಲಿ ಮಂಗಳವಾರದಿಂದ ಆರಂಭವಾಗಲಿದೆ ಎಂದು ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು