ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಘಾನಿಸ್ತಾನದ ಆಧ್ಯಾತ್ಮಿಕ ಗುರು ಹತ್ಯೆ: ಶಂಕಿತನ ಬಂಧನ

Last Updated 6 ಜುಲೈ 2022, 13:54 IST
ಅಕ್ಷರ ಗಾತ್ರ

ಮುಂಬೈ: ಅಫ್ಘಾನಿಸ್ತಾನದ ಆಧ್ಯಾತ್ಮಿಕ ಗುರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್‌ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ.

ಯೆಯೋಲಾ ಪಟ್ಟಣದಲ್ಲಿ ಮಂಗಳವಾರಖ್ವಾಜಾ ಅಹ್ಮದ್ ಜರೀಫ್ ಚಿಸ್ಟಿಯನ್ನು ನಾಲ್ವರು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಪ್ರಾಥಮಿಕ ಮಾಹಿತಿ ಪ್ರಕಾರ, ’ಆಸ್ತಿ ವಿಚಾರದಲ್ಲಿ ಉಂಟಾದ ಹಣಕಾಸು ವಿವಾದಕ್ಕೆ ಕೊಲೆ ನಡೆದಿದೆ. ಚಿಸ್ಟಿ ಅವರು ’ಸೂಫಿ ಬಾಬ’ ಎಂದೇ ಹೆಸರುವಾಸಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದು, ಕೇಂದ್ರ ಸರ್ಕಾರ ಅವರಿಗೆ ನಿರಾಶ್ರಿತರ ಪಾಸ್ ನೀಡಿತ್ತು. ಎಲ್ಲ ಆಯಾಮಗಳಿಂದಲೂ ಪ್ರಕರಣದ ತನಿಖೆ ಮಾಡಲಾಗುತ್ತಿದೆ‘ ಎಂದು ನಾಸಿಕ್‌ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

’ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳಿದ್ದು, ಮತ್ತೊಬ್ಬನ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ‘ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT