ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮೇಲೆ ಅತ್ಯಾಚಾರ: ತಂದೆ, ಗೆಳೆಯನ ಬಂಧನ

Last Updated 12 ಅಕ್ಟೋಬರ್ 2020, 10:39 IST
ಅಕ್ಷರ ಗಾತ್ರ

ಥಾಣೆ: 17 ವರ್ಷದ ಬಾಲಕಿಯ ಮೇಲೆ ಆಕೆಯ ತಂದೆ ಮತ್ತು ಗೆಳೆಯ ಸೇರಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿರುವ ಕೃತ್ಯ ನಡೆದಿದ್ದು, ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿಗಳಾದ ಶಿಕ್ಷಕ, ಬಾಲಕಿಯ 51 ವರ್ಷದ ತಂದೆ ಮತ್ತು 21 ವರ್ಷದ ಗೆಳೆಯನನ್ನು ಈ ಸಂಬಂಧ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟ್ಟಣದ ವಸಿಂದ್ ಪಟ್ಟಣದಲ್ಲಿ ಮೂರು ದಿನದ ಹಿಂದೆ ಸತ್ತ ಸ್ಥಿತಿಯಲ್ಲಿದ್ದ ಭ್ರೂಣವೊಂದು ಪತ್ತೆಯಾಗಿತ್ತು. ಇದರ ತನಿಖೆ ಆರಂಭಿಸಿದಾಗ ಕೃತ್ಯವು ತಿಳಿದುಬಂದಿದೆ ಎಂದು ಎಎಸ್‌ಐ ಯೋಗೇಶ್ ಗೌರವ್ ಅವರು ತಿಳಿಸಿದ್ದಾರೆ.

ತನಿಖೆಯ ವೇಳೆ ಸಂತ್ರಸ್ತೆಯು ತಂದೆ ಮತ್ತು ಗೆಳೆಯ ಸೇರಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದರು ಎಂದು ತಿಳಿಸಿದ್ದಾರೆ. ಬಾಲಕಿಯ ಕುಟುಂಬವು ಈ ಹಿಂದೆ ಪನ್ವೆಲ್‌ ಪ್ರದೇಶದಲ್ಲಿ ವಾಸವಿದ್ದು, ಅಲ್ಲಿ ಆಕೆಗೆ ಯುವಕನ ಪರಿಚಯವಾಗಿತ್ತು.

ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಪೋಕ್ಸೊ ಅನ್ವಯ ಮೊಕದ್ದಮೆ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಬಂಧಿತರ ಡಿಎನ್‌ಎ ಪರೀಕ್ಷೆಯನ್ನೂ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT