ಸೋಮವಾರ, ಡಿಸೆಂಬರ್ 6, 2021
27 °C

ಕೋವಿಡ್‌ನ ಮಹಾಭಾರತ ನಡೆಯುತ್ತಿರುವಾಗ ಮೋದಿ ಸರ್ಕಾರ ನಾಪತ್ತೆ: ಕಾಂಗ್ರೆಸ್

ಪಿಟಿಐ Updated:

ಅಕ್ಷರ ಗಾತ್ರ : | |

Randeep Surjewala

ನವದೆಹಲಿ: ಬುಧವಾರ ದೇಶದಲ್ಲಿ ಕೋವಿಡ್  ಪ್ರಕರಣಗಳ ಸಂಖ್ಯೆ 50 ಲಕ್ಷ  ದಾಟಿದೆ. ದೇಶದಲ್ಲಿ ರೋಗವನ್ನು ಹೇಗೆ ನಿಯಂತ್ರಿಸಬಹುದು ಎಂದು ಹೇಳಿ ಅಥವಾ ಇದಕ್ಕೂ ದೇವರೇ ಕಾರಣ ಎಂದು ಹೇಳುತ್ತೀರಾ? ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಕೊರೊನಾವೈರಸ್ ರೋಗದ ಮಹಾಭಾರತ ಇಲ್ಲಿ  ನಡೆಯುತ್ತಿದೆ. ಹೀಗಿರುವಾಗ ಮೋದಿ ಸರ್ಕಾರ ನಾಪತ್ತೆ ಆಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 40 ಲಕ್ಷ ದಾಟಿ ನಂತರ 11 ದಿನಗಳಲ್ಲಿ  50,20,359ಕ್ಕೆ ತಲುಪಿದೆ. ಸಾವಿನ ಸಂಖ್ಯೆ 82,006ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 1,290 ಮಂದಿ ಮೃತಪಟ್ಟಿದ್ದಾರೆ ಎಂದು  ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.

ಬುಧವಾರ ಸರಣಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುರ್ಜೇವಾಲಾ ಕೋವಿಡ್ 19 ಬಗ್ಗೆ ಪ್ರಧಾನಿಯವರು ಈ ಪ್ರಶ್ನೆಗಳಿಗೆ ಉತ್ತರಿಸುತ್ತಾರೆಯೇ ಎಂದು ಕೇಳಿದ್ದಾರೆ. 

1. ಪ್ರತಿದಿನ ಕೊರೊನಾವೈರಸ್ ಸೋಂಕು  -ಜಗತ್ತಿನಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ  (90,123 ಸೋಂಕು ಪ್ರಕರಣಗಳು)
2. ದಿನದಲ್ಲಿ ಸಾವಿನ ಪ್ರಮಾಣ -  ಜಗತ್ತಿನಲ್ಲಿ ಭಾರತ ಪ್ರಥಮ (1,290 ಸಾವು) 
3. ಕೊರೊನಾವೈರಸ್ ಸೋಂಕು ಪ್ರಮಾಣ ದುಪ್ಪಟ್ಟಾಗುವ ದರ- ಜಗತ್ತಿನಲ್ಲಿ ಭಾರತ ಪ್ರಥಮ ( 31 ದಿನಗಳಲ್ಲಿ ದುಪ್ಪಟ್ಟಾಗಿದೆ).
4. ಒಟ್ಟು  ಸೋಂಕು ಪ್ರಕರಣಗಳ ಸಂಖ್ಯೆ- ಜಗತ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ (9,95,933 ಸೋಂಕು ಪ್ರಕರಣಗಳು). ಅದೇ ವೇಳೆ ಸಾವಿನ ಪ್ರಮಾಣದಲ್ಲಿ ಜಾಗತಿಕ ಮಟ್ಟದಲ್ಲಿ  ಭಾರತ ಮೂರನೇ ಸ್ಥಾನದಲ್ಲಿದೆ (82,066 ಸಾವು) .
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು