ಮಂಗಳವಾರ, ಜನವರಿ 26, 2021
24 °C

ಮಹಾರಾಷ್ಟ್ರದಲ್ಲಿ ಹಕ್ಕಿ ಜ್ವರದಿಂದ 900 ಕೋಳಿಗಳು ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಔರಂಗಾಬಾದ್‌: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಮುರಂಬಾ ಗ್ರಾಮದ ಕೋಳಿ ಫಾರ್ಮ್‌ವೊಂದರಲ್ಲಿ ಕೆಲ ದಿನಗಳ ಹಿಂದೆ 900 ಕೋಳಿಗಳು ಮೃತಪಟ್ಟಿದ್ದವು. ಈ ಕೋಳಿಗಳ ಸಾವಿಗೆ ‘ಹಕ್ಕಿ ಜ್ವರ’ವೇ ಕಾರಣ ಎಂಬುದು ದೃಢಪಟ್ಟಿದೆ ಎಂದು ಹಿರಿಯ ಅಧಿಕಾರಿಗಳು ಸೋಮವಾರ ಹೇಳಿದರು.

‘ಈ ಹಿನ್ನೆಲೆಯಲ್ಲಿ ಮುರಂಬಾ ಗ್ರಾಮದಲ್ಲಿ ಸುಮಾರು 8,000 ಪಕ್ಷಿಗಳನ್ನು ಕೊಲ್ಲಲು ಜಿಲ್ಲಾಡಳಿತ ನಿರ್ಧರಿಸಿದೆ’ ಎಂದು ಕಲೆಕ್ಟರ್ ದೀಪಕ್ ಮುಗ್ಲಿಕರ್ ಅವರು ತಿಳಿಸಿದರು.

‘900 ಕೋಳಿಗಳ ಸಾವಿಗೆ ಕಾರಣ ಹಕ್ಕಿ ಜ್ವರ ಎಂಬುದು ದೃಢಪಟ್ಟಿದೆ. ಈ ಕೋಳಿ ಫಾರ್ಮ್‌ನ 1 ಕಿ.ಮೀ ಅಂತರದಲ್ಲಿರುವ ಎಲ್ಲಾ ಪಕ್ಷಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ. ಆ ಸ್ಥಳಗಳಿಂದ ಯಾವುದೇ ಪಕ್ಷಿಗಳನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸುವುದಿಲ್ಲ’ ಎಂದು ಅವರು ಮಾಹಿತಿ ನೀಡಿದರು.

‘ಕೋಳಿಗಳು ಮೃತಪಟ್ಟ ಸ್ಥಳದಿಂದ 10 ಕಿ.ಮೀ ದೂರದ ತನಕ ನಿರ್ಬಂಧವನ್ನು ವಿಧಿಸಲಾಗಿದೆ. ಇದರಿಂದಾಗಿ ಯಾರೂ ಭಯಭೀತರಾಗುವ ಅವಶ್ಯಕತೆಯಿಲ್ಲ’ ಎಂದು ಅವರು ಹೇಳಿದರು.

ಕೇರಳ, ರಾಜಸ್ತಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು