ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ಲಸಿಕೆ, ಆಮ್ಲಜನಕ ಕಳುಹಿಸಿ: ಕೇಂದ್ರಕ್ಕೆ ಮಹಾರಾಷ್ಟ್ರ ಸಚಿವ ಮನವಿ

Last Updated 7 ಮೇ 2021, 17:00 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್-19 ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಮತ್ತಷ್ಟು ಲಸಿಕೆ, ಆಮ್ಲಜನಕ ಮತ್ತು ರೆಮ್‌ಡಿಸಿವಿರ್‌ ರವಾನಿಸುವಂತೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಅವರು ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಮನವಿ ಮಾಡಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರಾಜೇಶ್‌,'ನಮಗೆ 1700 ಟನ್‌ ಆಮ್ಲಜನಕದ ಅಗತ್ಯವಿದೆ. ಅಗತ್ಯವಿರುವಷ್ಟು ಒದಗಿಸಿಕೊಡುವಂತೆ ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ. ನಾವು ಎರಡು ದಿನಗಳ ಹಿಂದೆ 9 ಲಕ್ಷ ಲಸಿಕೆ ಪಡೆದಿದ್ದೇವೆ. ಇದುವರೆಗೆ 8ಲಕ್ಷ ಲಸಿಕೆ ವಿತರಿಸಿದ್ದೇವೆ.ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ರವಾನಿಸುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆʼ ಎಂದು ತಿಳಿಸಿದ್ದಾರೆ.

ʼ45 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನಬಹುತೇಕ4 ಲಕ್ಷ ಜನರು ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಕೋವ್ಯಾಕ್ಸಿನ್‌ ಸರಬರಾಜು ಆಗುತ್ತಿಲ್ಲ. ಒಂದುವೇಳೆ ನಮಗೆ ಅದು ಸರಬರಾಜು ಆಗದಿದ್ದರೆ, ನಾವು18ರಿಂದ 44 ವರ್ಷದವರಿಗೆ ನಿಗದಿಪಡಿಸಿರುವ ಲಸಿಕೆಯನ್ನೇ45 ವರ್ಷ ಮತ್ತು ಅದಕ್ಕಿಂತಮೇಲ್ಪಟ್ಟವರಿಗೆ ನೀಡಬೇಕಾಗುತ್ತದೆʼ ಎಂದಿದ್ದಾರೆ.

ಮುಂದುವರಿದು,ಭಾರತೀಯ ಪ್ರಧಾನ ಔಷಧ ನಿಯಂತ್ರಕದಿಂದ (ಡಿಸಿಜಿಐ) ಅನುಮತಿಪಡೆದ ಬಳಿಕರಾಜ್ಯ ಸರ್ಕಾರವು 3 ಲಕ್ಷ ರೆಮ್‌ಡಿಸಿವಿರ್‌ ಆಮದು ಮಾಡಿಕೊಳ್ಳಲುಆರಂಭಿಸಿದೆ ಎಂದೂ ಅವರು ತಿಳಿಸಿದ್ದಾರೆ.

ʼಡಿಸಿಜಿಐನಿಂದ ಅನುಮತಿ ದೊರೆತ ಬಳಿಕ ನಾವು3 ಲಕ್ಷ ರೆಮ್‌ಡಿಸಿವಿರ್‌ ಆಮದು ಮಾಡಿಕೊಳ್ಳಲು ಆರಂಭಿಸಿದ್ದೇವೆ. ಕೇಂದ್ರ ಸರ್ಕಾರವು ನಿಗದಿಪಡಿಸಿರುವಷ್ಟು ರೆಮ್‌ಡಿಸಿವಿರ್‌ ಚುಚ್ಚುಮದ್ದನ್ನು ನಾವು ಸ್ವೀಕರಿಸಿಲ್ಲ. ನಾವು ಕೇಂದ್ರದ ಮೂಲಕ ಯುಎಸ್‌ ನೆರವಿನಿಂದ52,000 ರೆಮಿಡಿಸಿವಿರ್‌ ಚುಚ್ಚುಮದ್ದು ಪಡೆದುಕೊಂಡಿದ್ದೇವೆʼ ಎಂದು ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ, ಕೇರಳ, ಉತ್ತರ ಪ್ರದೇಶ, ರಾಜಸ್ಥಾನ, ಆಂಧ್ರ ಪ್ರದೇಶ, ಗುಜರಾತ್‌, ತಮಿಳುನಾಡು, ಛತ್ತೀಸಗಡ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ಬಿಹಾರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT