ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರಕ್ಕೆ ಜುಲೈ–ಆಗಸ್ಟ್‌ನಲ್ಲಿ ಕೋವಿಡ್‌ 3ನೇ ಅಲೆಯ ಸಂಕಷ್ಟ: ಟೋಪೆ

Last Updated 30 ಏಪ್ರಿಲ್ 2021, 3:25 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌–19 ಎರಡನೇ ಅಲೆಯಿಂದ ಈಗಾಗಲೇ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಮಹಾರಾಷ್ಟ್ರವು ಜುಲೈ–ಆಗಸ್ಟ್‌ನಲ್ಲಿ ಕೊರೊನಾ ವೈರಸ್‌ನ ಮೂರನೇ ಅಲೆ ಎದುರಿಸಬೇಕಾಗಬಹುದು ಎಂದು ಆರೋಗ್ಯ ಸಚಿವ ರಾಜೇಶ್‌ ಟೋಪೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಗುರುವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್‌ ದೃಢಪಟ್ಟ 66,159 ಹೊಸ ಪ್ರಕರಣಗಳು ದಾಖಲಾಗಿದ್ದು, 771 ಮಂದಿ ಸಾವಿಗೀಡಾಗಿದ್ದಾರೆ.

'ಸೋಂಕು ಶಾಸ್ತ್ರಜ್ಞರ ಪ್ರಕಾರ, ಮಹಾರಾಷ್ಟ್ರವು ಜುಲೈ ಅಥವಾ ಆಗಸ್ಟ್‌ನಲ್ಲಿ ಕೋವಿಡ್‌–19 ಮೂರನೇ ಅಲೆಯನ್ನು ಎದುರಿಸಬೇಕಾಗುತ್ತದೆ' ಎಂದು ಟೋಪೆ ಹೇಳಿದ್ದಾರೆ.

ಮೇ ಅಂತ್ಯದ ವೇಳೆಗೆ ಮಹಾರಾಷ್ಟ್ರದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ. ಅಕಸ್ಮಾತ್‌ ಜುಲೈ ಅಥವಾ ಆಗಸ್ಟ್‌ ಹೊತ್ತಿಗೆ ಕೋವಿಡ್‌ ಮೂರನೇ ಅಲೆಯು ಎದುರಾದರೆ, ಪರಿಸ್ಥಿತಿ ನಿರ್ವಹಣೆಯು ಸವಾಲಿನದಾಗಲಿದೆ. ಆ ವೇಳೆಗೆ ರಾಜ್ಯವು ವೈದ್ಯಕೀಯ ಆಮ್ಲಜನಕ ಪೂರೈಕೆಗಾಗಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಿದೆ ಎಂದಿದ್ದಾರೆ.

ಕೋವಿಡ್‌–19 ನಿರ್ವಹಣೆಯ ಕುರಿತು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಲಾಗಿದೆ. ಜಿಲ್ಲಾಧಿಕರಿಗಳು, ಆಯುಕ್ತರು ಸಭೆಯಲ್ಲಿ ಭಾಗಿಯಾಗಿದ್ದರು. ಮೇ 15ರ ವರೆಗೂ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ.

ಗಂಭೀರ ಸ್ಥಿತಿಯಲ್ಲಿರುವ ಕೋವಿಡ್‌–19 ರೋಗಿಗಳ ಚಿಕಿತ್ಸೆಗಾಗಿ ರೆಮ್‌ಡಿಸಿವಿರ್‌ ಇಂಜೆಕ್ಷನ್‌ ನೀಡಲು ಕೊರತೆ ಎದುರಾಗಿದ್ದು, ರಾಜ್ಯಕ್ಕೆ 10,000ದಿಂದ 15,000 ರೆಮ್‌ಡಿಸಿವಿರ್‌ ಶೀಶೆಗಳ ಕೊರತೆ ಇರುವುದಾಗಿ ಸರ್ಕಾರ ಹೇಳಿದೆ.

ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ, ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳ ವ್ಯವಸ್ಥೆ, ಜಿಲ್ಲೆಗಳಿಗೆ ಸಿಟಿ ಸ್ಕ್ಯಾನ್‌ ಮತ್ತು ಎಂಆರ್‌ಐ ಮೆಶಿನ್‌ಗಳ ಸೌಲಭ್ಯವನ್ನು ಪೂರೈಸಲು ಪ್ರಯತ್ನಿಸಲಾಗುತ್ತಿದೆ ಎಂದು ಟೋಪೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT