ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಐದು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ

Last Updated 26 ಮಾರ್ಚ್ 2021, 10:19 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳಾದ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಡ ಮತ್ತು ಗುಜರಾತ್‌ನಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳಲ್ಲಿ ತೀವ್ರ ಏರಿಕೆ ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಭಾರತದಲ್ಲಿ 59,118 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಇದು ಈ ವರ್ಷದ ಗರಿಷ್ಠ ಪ್ರಕರಣವಾಗಿದೆ.

ಫೆಬ್ರುವರಿ ಮಧ್ಯದಲ್ಲಿ ಇಳಿಮುಖವಾಗಿದ್ದ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆಯು, ಸುಮಾರು ಮೂರೂವರೆ ತಿಂಗಳ ನಂತರ 4-ಲಕ್ಷಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 4.21 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಒಂದೇ ದಿನದಲ್ಲಿ ಸೋಂಕು ಪ್ರಕರಣಗಳಲ್ಲಿ 25,874ರಷ್ಟು ಏರಿಕೆ ದಾಖಲಾಗಿದೆ.

'ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಮಹಾರಾಷ್ಟ್ರ, ಕೇರಳ ಮತ್ತು ಪಂಜಾಬ್ ರಾಜ್ಯಗಳಲ್ಲೇ ಶೇ 73.64 ರಷ್ಟು ಪ್ರಕರಣಗಳಿವೆ' ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೈನಂದಿನ ಕೋವಿಡ್-19 ಪ್ರಕರಣಗಳಿಗೆ ಸಂಬಂಧಿಸಿದಂತೆ, ಮಹಾರಾಷ್ಟ್ರವು ಒಂದು ದಿನದಲ್ಲಿ ಅತಿ ಹೆಚ್ಚು 35,952 ಸೋಂಕು ಪ್ರಕರಣಗಳನ್ನು ವರದಿ ಮಾಡಿದೆ. ನಂತರ ಪಂಜಾಬ್‌ನಲ್ಲಿ 2,661 ಮತ್ತು ಕರ್ನಾಟಕದಲ್ಲಿ 2,523 ಸೋಂಕು ಪ್ರಕರಣಗಳು ದಾಖಲಾಗಿವೆ. ಕೋವಿಡ್-19 ಹೊಸ ಪ್ರಕರಣಗಳಲ್ಲಿ ಶೇ 80ರಷ್ಟು ಪಾಲು ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಡ, ಕೇರಳ ಮತ್ತು ಗುಜರಾತ್‌ನಲ್ಲಿ ಪತ್ತೆಯಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಮಧ್ಯ ಪ್ರದೇಶ, ದೆಹಲಿ, ತಮಿಳು ನಾಡು, ಛತ್ತೀಸಗಡ, ಕರ್ನಾಟಕ, ಹರಿಯಾಣ ಮತ್ತು ರಾಜಸ್ಥಾನ ಸೇರಿ 10 ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇರುವುದಾಗಿ ತಿಳಿಸಿದೆ.

ಭಾರತದಲ್ಲಿ ಒಟ್ಟಾರೆ 1,12,64,637 ಜನರು ಗುಣಮುಖರಾಗಿದ್ದು, ಒಂದು ದಿನದಲ್ಲಿ 32,987 ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ದಿನದಲ್ಲಿ 257 ಸಾವುಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 111 ಜನರು ಮತ್ತು ಪಂಜಾಬ್‌ನಲ್ಲಿ 43 ಜನ ಮೃತಪಡುವುದರೊಂದಿಗೆ ಆರು ರಾಜ್ಯಗಳಲ್ಲೇ ಶೇ 78.6ರಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಒಡಿಶಾ, ಪುದುಚೇರಿ, ಲಕ್ಷದ್ವೀಪ, ಸಿಕ್ಕಿಂ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯು, ಲಡಾಖ್, ಮಣಿಪುರ, ತ್ರಿಪುರ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಅರುಣಾಚಲ ಪ್ರದೇಶ ಸೇರಿ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 24 ಗಂಟೆಗಳ ಅಂತರದಲ್ಲಿ ಯಾವುದೇ ಕೋವಿಡ್-19 ಸಾವುಗಳು ವರದಿಯಾಗಿಲ್ಲ.

ಈ ಮಧ್ಯೆ, ವರದಿಯ ಪ್ರಕಾರ ಶುಕ್ರವಾರ ಬೆಳಿಗ್ಗೆ 7 ಗಂಟೆಯವರೆಗೆ ದೇಶಾದ್ಯಂತ 9,01,887 ಜನರಿಗೆ ಲಸಿಕೆ ನೀಡಲಾಗಿದ್ದು, ಈವರೆಗೂ ಒಟ್ಟಾರೆ 5.5 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 80,34,547 ಆರೋಗ್ಯ ಕಾರ್ಯಕರ್ತರು ಮತ್ತು ಮೊದಲ ಡೋಸ್ ಪಡೆದ 85,99,981 ಮುಂಚೂಣಿ ಕಾರ್ಮಿಕರು, 51,04,398 ಆರೋಗ್ಯ ಕಾರ್ಯಕರ್ತರು ಮತ್ತು ಎರಡನೇ ಡೋಸ್ ಪಡೆದ 33,98,570 ಮುಂಚೂಣಿ ಕಾರ್ಮಿಕರು ಸೇರಿದ್ದಾರೆ.

ನಿತ್ಯ ಲಸಿಕೆ ಹಾಕುವ ಪ್ರಮಾಣದಲ್ಲಿ ಶೇ 70ರಷ್ಟು ಕೇರಳ, ಮಧ್ಯಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT