ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಆತ್ಮಹತ್ಯೆ: 5ನೇ ಸ್ಥಾನದಲ್ಲಿ ಕರ್ನಾಟಕ

Last Updated 29 ಆಗಸ್ಟ್ 2022, 14:02 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿದ್ದು, ಕಳೆದ ಒಂದು ವರ್ಷದಲ್ಲಿ ಶೇ 7.2ರಷ್ಟು ಏರಿಕೆ ಕಂಡಿದೆ.

2021ರಲ್ಲಿ ದೇಶದಾದ್ಯಂತ 1,64,033 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಅತೀ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ (22,207) ಮೊದಲ ಸ್ಥಾನದಲ್ಲಿದೆ. ನಂತರದ ನಾಲ್ಕು ಸ್ಥಾನಗಳಲ್ಲಿ ತಮಿಳುನಾಡು (18,925), ಮಧ್ಯಪ್ರದೇಶ (14,965), ಪಶ್ಚಿಮ ಬಂಗಾಳ (13,500) ಮತ್ತು ಕರ್ನಾಟಕ (13,056) ರಾಜ್ಯಗಳಿವೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ ಕೊನೆ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಆತ್ಯಹತ್ಯೆ ಪ್ರಮಾಣ ಶೇ 3.6ರಷ್ಟಿದೆ.ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ (2,840), ಪುದುಚೇರಿ (504) ಮೊದಲೆರಡು ಸ್ಥಾನಗಳಲ್ಲಿವೆ.

2020ರಲ್ಲಿ1,53,052 ಪ್ರಕರಣಗಳು ದಾಖಲಾಗಿದ್ದವು. ಇದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 6.2ರಷ್ಟು ಏರಿಕೆಯಾಗಿದೆ.

ವೃತ್ತಿಪರ ಅಥವಾ ವೃತ್ತಿ ಸಂಬಂಧಿತ ಸಮಸ್ಯೆಗಳು, ಪ್ರತ್ಯೇಕತೆ, ಕಿರುಕುಳ, ಹಿಂಸೆ, ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಅಸ್ವಸ್ಥತೆ, ಮದ್ಯ ವ್ಯಸನ, ಆರ್ಥಿಕ ನಷ್ಟ ಮತ್ತು ದೀರ್ಘಕಾಲದ ನೋವಿನಂತಹ ಸಮಸ್ಯೆಗಳು ದೇಶದಲ್ಲಿ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂದುರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT