ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಶುಕ್ರವಾರ 10,000ಕ್ಕೂ ಹೆಚ್ಚು ಕೋವಿಡ್ ಪ್ರಕರಣ ಪತ್ತೆ

Last Updated 5 ಮಾರ್ಚ್ 2021, 15:51 IST
ಅಕ್ಷರ ಗಾತ್ರ

ಮುಂಬೈ: ಮಹಾರಾ+ಷ್ಟ್ರದಲ್ಲಿ ಶುಕ್ರವಾರ 10,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುವ ಮೂಲಕ ಅಲ್ಲಿನ ಸರ್ಕಾರದ ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ. ಕಳೆದ, ಅಕ್ಟೋಬರ್‌ನಿಂದೀಚೆಗೆ ಇದೇ ಮೊದಲ ಬಾರಿಗೆ 10 ಸಾವಿರ ಪ್ರಕರಣ ಪತ್ತೆಯಾಗಿವೆ.

ಶುಕ್ರವಾರ, ಮಹಾರಾಷ್ಟ್ರದಲ್ಲಿ 10,216 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 53 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 21,98,399ಕ್ಕೆ ಏರಿದ್ದು, ಸಾವಿನ ಸಂಖ್ಯೆ 52,393 ಕ್ಕೆ ತಲುಪಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 88,838 ಕ್ಕೆ ಜಿಗಿದಿದೆ.

ಕಳೆದ 24 ಗಂಟೆಗಳಲ್ಲಿ ಪುಣೆ, ನಾಸಿಕ್, ಔರಂಗಾಬಾದ್, ಅಮರಾವತಿ ಮತ್ತು ನಾಗ್ಪುರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಗಿವೆ. ಸಾವಿನ ಪ್ರಮಾಣ ಶೇ. 2.38 ರಷ್ಟಾಗಿದೆ.

ಮುಂಬೈನಲ್ಲಿ 1,174 ಹೊಸ ಪ್ರಕರಣಗಳು ವರದಿಯಾದರೆ ಬೃಹನ್ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ 2,135 ಹೊಸ ಪ್ರಕರಣಗಳು ದಾಖಲಾಗಿವೆ

ಮುಂದಿನ ವಾರ, ಮಹಾರಾಷ್ಟ್ರ ಸರ್ಕಾರವು ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವ ನಿರೀಕ್ಷೆ ಇದೆ.

ಇದುವರೆಗೆ 1,66,86,880 ಪ್ರಯೋಗಾಲಯದ ಮಾದರಿಗಳನ್ನ ಟೆಸ್ಟ್ ಮಾಡಲಾಗಿದ್ದು, 21,98,399 ಕೋವಿಡ್ -19 ಪಾಸಿಟಿವ್ (13.17%) ಕಂಡು ಬಂದಿದೆ. ಪ್ರಸ್ತುತ, 4,10,411 ಜನರು ಹೋಮ್ ಕ್ವಾರಂಟೈನ್ ಮತ್ತು 4,203 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT