ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಕೆಲವೆಡೆ ಆಲಿಕಲ್ಲು ಸಹಿತ ಅಕಾಲಿಕ ಮಳೆ

Last Updated 6 ಮಾರ್ಚ್ 2023, 11:46 IST
ಅಕ್ಷರ ಗಾತ್ರ

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಗರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಅಕಾಲಿಕವಾಗಿ ಭಾರೀ ಮಳೆ ಸುರಿದಿದೆ.

ಮಧ್ಯರಾತ್ರಿ ಗಾಳಿ, ಗುಡುಗು ಮತ್ತು ಮಿಂಚು ಸಮೇತವಾಗಿ ಮಳೆ ಆರ್ಭಟಿಸಿದೆ. ಇನ್ನೂ ಕೆಲವೆಡೆ ಆಲಿಕಲ್ಲು ಸಮೇತ ಮಳೆ ಸುರಿದಿದೆ.

ಹವಾಮಾನ ಇಲಾಖೆಯ ಪ್ರಕಾರ ನಾಸಿಕ್ ನಗರದಲ್ಲಿ 24 ಗಂಟೆಗಳಲ್ಲಿ 9.ಮಿ.ಮಿ. ಮಳೆ ಸುರಿದಿದೆ. ಪ್ರಮುಖ ನಗರಗಳಾದ ಪಂಚವಟಿ, ಸತ್ಪುರ್, ಅಂಬಡ್, ಹೊಸ ನಾಸಿಕ್, ದೇವಲಾಲಿ ಕ್ಯಾಂಪ್ ಮತ್ತು ಇಂದಿರಾನಗರದಲ್ಲಿ ಮಳೆಯಾಗಿದೆ. ಅಷ್ಟೇ ಅಲ್ಲದೆ ಜಿಲ್ಲೆಯ ಮನ್ಮಾಡ್‌, ಯೆವಲಾ, ನಿಫಾಡ್, ಲಾಸಲ್ಗಾಂವ್, ತ್ರಯಂಬಕೇಶ್ವರ ಮತ್ತು ಇಗತ್ಪೂರಿಗಳಲ್ಲೂ ಮಳೆಯಾಗಿದೆ ಎಂದು ಇಲಾಖೆಯ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT