ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ಸಮಸ್ಯೆ ನಿವಾರಣೆಗಾಗಿ ಟ್ಯಾಂಕರ್‌ನಲ್ಲಿ ಮಂಟಪಕ್ಕೆ ಬಂದ ಜೋಡಿ

Last Updated 8 ಜುಲೈ 2022, 9:37 IST
ಅಕ್ಷರ ಗಾತ್ರ

ಪುಣೆ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜೋಡಿಯೊಂದು ಕಾರಿನ ಬದಲು ನೀರಿನ ಟ್ಯಾಂಕರ್‌ನಲ್ಲಿ ಮದುವೆ ಮಂಟಪಕ್ಕೆ ಬಂದಿದ್ದಾರೆ. ಈ ಮೂಲಕ ನಗರದಲ್ಲಿ ತಲೆದೋರಿರುವ ನೀರು ಪೂರೈಕೆ ವ್ಯವಸ್ಥೆಯ ಸಮಸ್ಯೆ ನಿವಾರಣೆಗೆ ಆಡಳಿತ ಮಂಡಳಿಯ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಸಮಸ್ಯೆ ನಿವಾರಣೆಯಾಗುವ ತನಕ ಹನಿಮೂನ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹಠ ಹಿಡಿದಿದ್ದಾರೆ.

ಮಂಗಳವಾರ್‌ ಪೇಟ್‌ ನಿವಾಸಿ ವಿಶಾಲ್‌ ಕೋಲೆಕರ್‌(32) ಗುರುವಾರ ನೀರಿನ ಟ್ಯಾಂಕರ್‌ನಲ್ಲಿ ಮಂಟಪಕ್ಕೆ ಬಂದು ವಿವಾಹ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಿನ್ಸ್‌ ಕ್ಲಬ್‌ ಎಂಬ ಗ್ರೂಪ್‌ ಹೊಂದಿದ್ದೇವೆ. ಇದರ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಆಡಳಿತ ಮಂಡಳಿ ಗಮನಕ್ಕೆ ತರುವ ಪ್ರಯತ್ನ ನಡೆಸಿದ್ದೇವೆ. ಸರಿಯಾಗಿ ನೀರು ಪೂರೈಕೆಯಾಗದಿರುವ ಬಗ್ಗೆಯೂ ದೂರು ನೀಡುತ್ತಿದ್ದೇವೆ ಎಂದು ಕೋಲೆಕರ್‌ ವಿವರಿಸಿದ್ದಾರೆ.

ನೀರು ಪೂರೈಕೆ ಸಮಸ್ಯೆ ಬಗ್ಗೆ ಗಮನ ಸೆಳೆಯಲು ನೀರಿನ ಟ್ಯಾಂಕರ್‌ ಮೂಲಕ ವಿವಾಹವಾಗುವ ನಿರ್ಧಾರವನ್ನು ಪತ್ನಿ ಅಪರ್ಣಾ ಜೊತೆ ನಿರ್ಧರಿಸಿದೆ ಎಂದು ಕೋಲೆಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT