ಸೋಮವಾರ, ಜೂನ್ 14, 2021
26 °C

ಮಮತಾರದ್ದು ನಾಚಿಕೆಗೇಡಿನ ವರ್ತನೆ: ರವಿಶಂಕರ್‌ ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಮತಾ ಅವರದ್ದು ನಾಚಿಕೆಗೇಡಿನ, ಘನತೆಯಿಲ್ಲದ, ಖಂಡನಾರ್ಹ ವರ್ತನೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಪಶ್ಚಿಮ ಬಂಗಾಳದಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿಯಿಂದ ಇಂತಹ ನಡವಳಿಕೆಯನ್ನು ಯಾರೂ ನಿರೀಕ್ಷಿಸುವುದಿಲ್ಲ ಎಂದಿದ್ದಾರೆ.

ಓದಿ: 

ಪ್ರಧಾನಿ ಕರೆದ ಸಭೆಗಳಿಗೆ ಮಮತಾ ಅವರು ಹಾಜರಾಗುವುದೇ ಅಪರೂಪ. ಗುರುವಾರದ ಸಭೆಗೆ ಅಡ್ಡಿಪಡಿಸಲು ಮಮತಾ ಯತ್ನಿಸಿದ್ದರು. 24 ಪರಗಣ ಜಿಲ್ಲೆಯ ಜಿಲ್ಲಾಧಿಕಾರಿಯು ಮಾತನಾಡುವುದಕ್ಕೂ ಮಮತಾ ಅವಕಾಶ ಕೊಟ್ಟಿಲ್ಲ ಎಂದೂ ಪ್ರಸಾದ್‌ ಆರೋಪಿಸಿದ್ದಾರೆ. ‘ಪ್ರಧಾನಿ ಕರೆದ ಸಭೆಯಲ್ಲಿ ಮುಖ್ಯಮಂತ್ರಿಯೊಬ್ಬರು ಈ ರೀತಿ ಘನತೆಯಿಲ್ಲದ ವರ್ತನೆ ತೋರುವುದು ದುರದೃಷ್ಟಕರ. ಜತೆಗೆ, ಅವರು ಈ ರೀತಿ ಮಾಡುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿರುವ ಅತ್ಯುತ್ತಮ ಪದ್ಧತಿಗಳೇನು ಎಂದು ದೇಶದ ಪ್ರಧಾನಿಯು ಜಿಲ್ಲಾಧಿಕಾರಿಗಳಿಂದ ತಿಳಿಯಲು ಬಯಸಿದರೆ ಮಮತಾ ಅವರಿಗೆ ಆಗುವ ತೊಂದರೆ ಏನು ಎಂದು ಕೇಳಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು