ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ಅಪರಾಧಿಗೆ 20 ವರ್ಷ ಸಜೆ, ₹33,000 ದಂಡ

Last Updated 19 ಮಾರ್ಚ್ 2023, 13:15 IST
ಅಕ್ಷರ ಗಾತ್ರ

ಭದೋಹಿ, ಉತ್ತರಪ್ರದೇಶ (ಪಿಟಿಐ): 16 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಪ್ರಕರಣದಲ್ಲಿ 22 ವರ್ಷದ ಯುವಕನಿಗೆ ವಿಶೇಷ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಸಜೆ ಮತ್ತು ₹33,000 ದಂಡ ವಿಧಿಸಿದೆ.

ಫೋಕ್ಸೊ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಮಧು ಡೋಗ್ರಾ ಅವರು ದಂಡದ ಮೊತ್ತದಲ್ಲಿ ₹ 25 ಸಾವಿರ ಹಣವನ್ನು ಬಾಲಕಿಗೆ ಕೊಡಬೇಕು ಎಂದು ಶನಿವಾರ ಆದೇಶಿದರು.

2022ರ ಏಪ್ರಿಲ್‌ 29 ರಂದು ಗೋಪಿಗಂಜ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿತ್ತು. ಅಪರಾಧಿ ಅಜಯ್‌ಕುಮಾರ್‌ ಯಾದವ್‌, 8ನೇ ತರಗತಿಯ ಬಾಲಕಿಯನ್ನು ಅಪಹರಿಸಿ ಕೃತ್ಯ ಎಸಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT