ಬುಧವಾರ, ಡಿಸೆಂಬರ್ 8, 2021
24 °C

ಮದುವೆಯಾಗಲು ಹಿಂದೂ ಧರ್ಮದವನ ರೀತಿ ಸೋಗು: ಮುಸಲ್ಮಾನ ವ್ಯಕ್ತಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನಗಾಂವ್: ಮದುವೆಯಾಗಲು ಹಿಂದೂ ಧರ್ಮದ ಸೋಗು ಧರಿಸಿದ್ದ ಮುಸಲ್ಮಾನ ವ್ಯಕ್ತಿಯನ್ನು ಕೇಂದ್ರ ಅಸ್ಸಾಂ ಹೋಜಾಯ್‌ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಆತನ ಪತ್ನಿ ದೂರು ನೀಡಿದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ (ಡಿಎಲ್ಎಸ್‌ಎ) ನೆರವು ಪಡೆದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು ಎಂದು ಲಂಬ್ಡಿಂಗ್‌ ಠಾಣಾಧಿಕಾರಿ ಎಸ್‌.ಕೆ.ಶರ್ಮಾ ಅವರು ತಿಳಿಸಿದ್ದಾರೆ.

ಮಹಿಳೆಯು ಅಸ್ಸಾಂ ದೀಮಾಜಿ ಜಿಲ್ಲೆಯವರು. ಆರೋಪಿಯು ಲಂಬ್ಡಿಂಗ್‌ ಠಾಣೆಯ ವ್ಯಾಪ್ತಿಯ ನಿವಾಸಿ. ಇಬ್ಬರು ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಪರಿಚಯ ಬೆಳೆದಿತ್ತು. ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡಿದ್ದ ಆತ ಮದುವೆಯಾದ ಬಳಿಕ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಲಾರಂಭಿಸಿದ್ದ. ಒಂದು ಹಂತದಲ್ಲಿ ಹಣದೊಂದಿಗೆ ಪರಾರಿಯಾಗಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಆರೋಪಿಯನ್ನು ಬಂಧಿಸಿದ್ದು, ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಧರ್ಮವನ್ನು ಮುಚ್ಚಿಟ್ಟು ಮದುವೆ ಆಗಿದ್ದು ಇದು, ಲವ್‌ ಜಿಹಾದ್‌ ಪ್ರಕರಣ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು