ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡರಿಂದ ಮಗಳನ್ನು ರಕ್ಷಿಸಿದ ತಂದೆಯನ್ನು ಥಳಿಸಿ ಕೊಂದರು!

ಉತ್ತರ ಪ್ರದೇಶ: ಗುಂಪು ಹತ್ಯೆಗೆ ತಂದೆ, ಶಿಕ್ಷಕ ಬಲಿ
Last Updated 7 ಸೆಪ್ಟೆಂಬರ್ 2020, 16:40 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಸೋಮವಾರ ಎರಡು ಗುಂಪು ಹತ್ಯೆಯ ಪ್ರಕರಣಗಳು ನಡೆದಿವೆ.

ಪುಂಡರ ಕಾಟ ತಾಳಲಾರದೇ ಮಗಳನ್ನು ಸಂಬಂಧಿಕರ ಮನೆಯಲ್ಲಿಟ್ಟಿದ್ದ ತಂದೆಯನ್ನು ಆರು ಜನರ ಗುಂಪೊಂದು ಥಳಿಸಿ ಹತ್ಯೆ ಮಾಡಿದ ಘಟನೆ ಮೇನ್‌ಪುರಿ ಜಿಲ್ಲೆಯಲ್ಲಿ ನಡೆದಿದೆ.

‘ಮೇನ್‌ಪುರಿ ಜಿಲ್ಲೆಯ ಖರಗ್‌ಜೀತ್ ನಗರದ ಮಿಠಾಯಿ ವ್ಯಾಪಾರಿ ಸರ್ವೇಶ್ ಕುಮಾರ್ ಅವರ 15 ವರ್ಷದ ಮಗಳಿಗೆ ಕೆಲ ಪುಂಡ ಯುವಕರು ಹಲವು ತಿಂಗಳಿನಿಂದ ಚುಡಾಯಿಸುತ್ತಿದ್ದರು. ಹಾಗಾಗಿ, ಸರ್ವೇಶ್ ಈಚೆಗೆ ತಮ್ಮ ಮಗಳನ್ನು ನೋಯ್ದಾದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು’ ಎನ್ನಲಾಗಿದೆ.

ಪುಂಡರ ಗುಂಪು ಸರ್ವೇಶ್ ತಮ್ಮ ಮಗಳನ್ನು ಮಾರಿದ್ದಾನೆ ಎಂದು ವದಂತಿ ಹಬ್ಬಿಸಿತ್ತು. ಇದರಿಂದ ಸರ್ವೇಶ್ ಅವರ ಮನೆ ಬಳಿ ಜನರು ಗುಂಪುಗೂಡಿದ್ದರು. ಲಾಠಿ ಮತ್ತು ಕಬ್ಬಿಣ ರಾಡ್‌ಗಳನ್ನು ಹೊಂದಿದ್ದ ಯುವಜನರ ಗುಂಪೊಂದು ಭಾನುವಾರ ಸರ್ವೇಶ್ ಅವರನ್ನು ಚೆನ್ನಾಗಿ ಥಳಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಸರ್ವೇಶ್ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

ಹತ್ಯೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣ: ಶಾಲಾ ಶಿಕ್ಷಕನನ್ನು ಗುಂಡಿಟ್ಟು ಕೊಂದಿದ್ದ ಆರೋಪಿಯೊಬ್ಬನನ್ನು ಗ್ರಾಮಸ್ಥರೇ ಗುಂಪು ಹತ್ಯೆ ಮಾಡಿದ ಘಟನೆ ಕುಶಿನಗರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಗೋರಖ್‌ಪುರದವನಾದ ಆರೋಪಿ ತನ್ನ ತಂದೆಯ ಬಂದೂಕಿನಿಂದ ತಾರಯಸುಜನ್ ಪ್ರದೇಶದ ಶಿಕ್ಷಕನನ್ನು ಗುಂಡಿಟ್ಟು ಕೊಂದಿದ್ದ. ಈ ವಿಷಯ ತಿಳಿದ ಗ್ರಾಮಸ್ಥರು ಆತನ ಮನೆಯ ಮುಂದೆ ನೆರೆದಾಗ ಆರೋಪಿ, ಜನರತ್ತ ಗುಂಡು ಹಾರಿಸುವುದಾಗಿ ಬೆದರಿಕೆ ಒಡ್ಡಿದ್ದ.

ಪೊಲೀಸರುಸ್ಥಳಕ್ಕೆ ಬಂದಾಗ ಆರೋಪಿ ಮನೆಯ ಮೇಲಿಂದ ಕೆಳಕ್ಕಿಳಿದು ಬಂದ. ಆದರೆ, ಪೊಲೀಸರು ಆತನನ್ನು ಬಂಧಿಸುವಷ್ಟರಲ್ಲೇ ಗ್ರಾಮಸ್ಥರು, ಕಲ್ಲು ಮತ್ತು ತಮ್ಮ ಕೈಗೆ ಸಿಕ್ಕ ವಸ್ತುಗಳಿಂದ ಆತನನ್ನು ಹೊಡೆದು ಸಾಯಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT