ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿಗಳಿಂದ ಮಕ್ಕಳ ರಕ್ಷಣೆಗೆ ಏರ್‌ಗನ್‌ ಹಿಡಿದಾತನ ವಿರುದ್ಧ ದೂರು ದಾಖಲು

Last Updated 17 ಸೆಪ್ಟೆಂಬರ್ 2022, 11:32 IST
ಅಕ್ಷರ ಗಾತ್ರ

ಕಾಸರಗೋಡು: ಬೀದಿನಾಯಿಗಳ ಉಪಟಳದಿಂದ ಬೇಸತ್ತು ಶಾಲಾ ಮಕ್ಕಳಿಗೆ ರಕ್ಷಣೆ ನೀಡಲು ಏರ್‌ಗನ್‌ ಹಿಡಿದು ಸಾಗಿದ ಕಾಸರಗೋಡು ಜಿಲ್ಲೆಯ ಬೇಕಲ ನಿವಾಸಿ ಸಮೀರ್‌ ವಿರುದ್ಧ ದೂರು ದಾಖಲಿಸಲಾಗಿದೆ.

ಕೇರಳದಾದ್ಯಂತ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆಯೇ ಸಮೀರ್‌ ಅವರು ಏರ್‌ಗನ್ ಹಿಡಿದು ವಿದ್ಯಾರ್ಥಿಗಳ ಗುಂಪೊಂದನ್ನು ಶಾಲೆಗೆ ಕರೆದೊಯ್ಯುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.

ವಿಡಿಯೊ ವೈರಲ್‌ ಆದ ಒಂದು ದಿನದ ಬಳಿಕ ಸಮೀರ್‌ ವಿರುದ್ಧ ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್‌ 153 ಅಡಿ ಪ್ರಕರಣ ದಾಖಲಾಗಿದೆ. ಏರ್‌ಗನ್‌ನಿಂದ ನಾಯಿಗಳನ್ನು ಕೊಲ್ಲಲು ಸಾಧ್ಯವಿಲ್ಲ. ಅದರಿಂದ ಹೊಡೆದು ಯಾವುದೇ ನಾಯಿಯನ್ನು ಗಾಯಗೊಳಿಸಿಲ್ಲ. ಕೇವಲ ಮಕ್ಕಳನ್ನು ರಕ್ಷಿಸುವ ದೃಷ್ಟಿಯಿಂದ ಏರ್‌ಗನ್‌ ಹಿಡಿದು ಸಾಗಿದ್ದಾಗಿ ಸಮೀರ್‌ ಸ್ಪಷ್ಟನೆ ನೀಡಿದ್ದಾರೆ.

ವಿದ್ಯಾರ್ಥಿಗಳ ಗುಂಪಿನ ಮುಂದೆ ಏರ್‌ಗನ್‌ ಹಿಡಿದು ಸಾಗುತ್ತಿರುವ ಸಮೀರ್‌, ಯಾವುದೇ ನಾಯಿ ತಮ್ಮ ಮೇಲೆ ದಾಳಿ ನಡೆಸಿದರೆ ಶೂಟ್‌ ಮಾಡುವುದಾಗಿ ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT