ಶನಿವಾರ, ಜುಲೈ 2, 2022
22 °C

ಪತ್ನಿ, 3 ತಿಂಗಳ ಮಗು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ಬರೇಲಿ: ಪತ್ನಿ ಮತ್ತು ಮಗಳನ್ನು ಹತ್ಯೆ ಮಾಡಿದ ಬಳಿಕ ವ್ಯಕ್ತಿಯೊಬ್ಬ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

26 ವರ್ಷದ ರಾಮ್‌ಪ್ರಕಾಶ್, ಪತ್ನಿ ಮೀನು(24) ಮತ್ತು ಅವರ ಮೂರು ತಿಂಗಳ ಮಗಳು ಸಾವಿಗೀಡಾಗಿದ್ದಾರೆ.

ಬೆಳಗ್ಗೆ ತುಂಬಾ ಹೊತ್ತಾದರೂ ಮನೆಯ ಬಾಗಿಲು ತೆರೆಯದಿದ್ದನ್ನು ಕಂಡು ಅನುಮಾನಗೊಂಡು ಮನೆಯಲ್ಲಿ ಇಣುಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆಗ ರಾಮ್‌ಪ್ರಕಾಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಮತ್ತು ಮಗಳ ಮೃತದೇಹ ಬೆಡ್ ಮೇಲೆ ಪತ್ತೆಯಾಗಿವೆ.

ಉತ್ತಮ್ ಗಂಜ್ ಪಶ್ಚಿಮ ಪ್ರದೇಶದ ನಿವಾಸಿಯಾಗಿದ್ದ ರಾಮ್‌ಪ್ರಕಾಶ್, ಕಳೆದ 18 ತಿಂಗಳ ಹಿಂದಷ್ಟೇ ಮೀನು ಎಂಬಾಕೆಯನ್ನು ವಿವಾಹವಾಗಿದ್ದರು.

ಪ್ರಾಥಮಿಕ ಮಾಹಿತಿ ಪ್ರಕಾರ, ರಾಮ್‌ಪ್ರಕಾಶ್ ತನ್ನ ಪತ್ನಿ ಮತ್ತು ಮಗುವನ್ನು ಕೊಂದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಸದ್ಯ ಪೊಲೀಸರು ಸ್ಥಳದಲ್ಲಿದ್ದು, ಮೂರು ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಎಸ್‌ಪಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು