ಭಾನುವಾರ, ಮೇ 16, 2021
26 °C

ಬೈಕ್‌ಗೆ ನಾಯಿ ಕಟ್ಟಿ ಎಳೆದಿದ್ದ ವ್ಯಕ್ತಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಲಪ್ಪುರಂ: ದ್ವಿಚಕ್ರ ವಾಹನಕ್ಕೆ ನಾಯಿಯನ್ನು ಕಟ್ಟಿ ಎಳೆದೊಯ್ದಿದ್ದ ಕ್ಸೇವಿಯರ್‌ ಎಂಬಾತನನ್ನು ಉತ್ತರ ಕೇರಳ ಎಡಕ್ಕರಾದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಪ್ರಾಣಿಹಿಂಸೆ ನಡೆಸಿದ ಕುರಿತು ಪ್ರಕರಣ ದಾಖಲಾಗಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಬಂಧಿತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ನಾಯಿ ಒಮ್ಮೆ ಈತನ ಚಪ್ಪಲಿಯನ್ನು ಕಚ್ಚಿತ್ತು. ಹೀಗಾಗಿ, ಆರೋಪಿಯು ಆಗಿಂದಾಗ್ಗೆ ಇಂತಹ ಕೃತ್ಯವನ್ನು ಎಸಗುತ್ತಿದ್ದ. ಇದನ್ನು ಗಮನಿಸಿದ್ದ ಸಾರ್ವಜನಿಕರೊಬ್ಬರು ನಾಯಿಯನ್ನು ಕಟ್ಟಿ ಎಳೆಯುತ್ತಿದ್ದನ್ನು ವಿಡಿಯೊ ಮಾಡಿ ಹಾಕಿದ್ದರು.

ನಾಯಿಯನ್ನು ಆಸ್ಪತ್ರೆಗೆ ಒಯ್ಯಲಾಗಿದೆ. ನಾಲ್ಕು ತಿಂಗಳ ಹಿಂದೆ ಕೊಚ್ಚಿಯಲ್ಲಿ ನಾಯಿ ಮರಿಯೊಂದನ್ನು ಕಾರಿಗೆ ಕಟ್ಟಿ ಎಳೆದೊಯ್ಯಲಾಗಿತ್ತು. ಆಗಲೂ ಆರೋಪಿಯನ್ನು ಬಂಧಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು