ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌ಡಿ ಸಂಶೋಧಕಿ ಮೇಲೆ ಲೈಂಗಿಕ ಕಿರುಕುಳ: ಚೆನ್ನೈ ಪೊಲೀಸರಿಂದ ಆರೋಪಿ ಸೆರೆ

Last Updated 28 ಮಾರ್ಚ್ 2022, 20:13 IST
ಅಕ್ಷರ ಗಾತ್ರ

ಚೆನ್ನೈ: ಪಶ್ಚಿಮ ಬಂಗಾಳ ಮೂಲದ ಪಿ.ಎಚ್.ಡಿ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಸಂಶೋಧಕ ವಿದ್ಯಾರ್ಥಿ ಕಿಂಗ್‌ಶುಕ್ ದೇವಶರ್ಮಾ ಎಂಬುವವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಮಹಿಳೆ ಈ ಸಂಬಂಧ ದೂರು ಸಲ್ಲಿಸಿದ ಒಂದು ವರ್ಷದ ಬಳಿಕ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಈ ಬಗ್ಗೆ ಕಾರ್ಯಾಚರಣೆ ಕೈಗೊಂಡ ಚೆನ್ನೈ ಪೊಲೀಸರ ವಿಶೇಷ ತಂಡವು ದೇವಶರ್ಮಾ ಅವರನ್ನು ಕೋಲ್ಕತ್ತದಲ್ಲಿ ಬಂಧಿಸಿದ್ದು, ಸದ್ಯ ಡೈಮಂಡ್ ಹಾರ್ಬರ್ ಠಾಣೆಯಲ್ಲಿ ಇಡಲಾಗಿದೆ. ಮ್ಯಾಜಿಸ್ಟ್ರೇಟ್ ಅವರಿಂದ ಆರೋಪಿಯ ಪ್ರಯಾಣಕ್ಕೆ ವಾರಂಟ್‌ ಪಡೆದು, ಆತನನ್ನು ಚೆನ್ನೈಗೆ ಕರೆತರಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT