ಶುಕ್ರವಾರ, ಡಿಸೆಂಬರ್ 4, 2020
24 °C

ಮಣಿಪುರ ಉಪಚುನಾವಣೆ: ಬಿಜೆಪಿ ಎರಡು, ಕಾಂಗ್ರೆಸ್‌ ಒಂದು ಕ್ಷೇತ್ರದಲ್ಲಿ ಮುನ್ನಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಂಪಾಲ್‌: ಮಣಿಪುರದಲ್ಲಿ ಮತ ಎಣಿಕೆ ಆರಂಭವಾಗಿದ್ದು, ಪ್ರಮುಖ ಪಕ್ಷಗಳ ನಡುವೆ ಪೈಪೋಟಿ ಬಲು ಜೋರಾಗಿದೆ. ಆರಂಭಿಕ ಮತ ಎಣಿಕೆಯ ಅಂಕಿಅಂಶಗಳ ಪ್ರಕಾರ, ಆಡಳಿತಾರೂಢ ಬಿಜೆಪಿ ಎರಡು ಸ್ಥಾನ, ಕಾಂಗ್ರೆಸ್‌ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಲಾ ಒಂದು ಕ್ಷೇತ್ರದಲ್ಲಿ ಮುಂದಿದ್ದಾರೆ.

ವಂಗೋಯಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಓನಮ್‌ ಲುಖೋಯ್‌ ಸಿಂಗ್‌ ಅವರು ನ್ಯಾಷನಲ್‌ ಪೀಪಲ್ಸ್‌ ಪಕ್ಷದ ಅಭ್ಯರ್ಥಿ ಖುರೈಜಮ್‌ ಲೋಕೆನ್‌ ಸಿಂಗ್‌ ಅವರಿಗಿಂತ 268 ಮತಗಳಿಂದ ಮುಂದಿದ್ದಾರೆ ಎಂದು ಆರಂಭಿಕ ಮತ ಎಣಿಕೆಯಲ್ಲಿ ತಿಳಿದು ಬಂದಿದೆ.

ಸೈತು ಕ್ಷೇತ್ರದಲ್ಲಿ ಬಿಜೆಪಿಯ ಗಮ್‌ಥಾಂಗ್ ಹಾಕಿಪ್ ಅವರು ಕಾಂಗ್ರೆಸ್‌ ಅಭ್ಯರ್ಥಿ ಲ್ಯಾಮ್‌ಟಿಂಥಾಂಗ್ ಹಾಕಿಪ್‌ಗಿಂತ 1,827 ಮತಗಳಿಂದ ಮುಂದಿದ್ದಾರೆ ಎಂದು ಇಸಿಐ ವೈಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವಾಂಗ್ಜಿಂಗ್ ಟೆಂಥಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊಯಿರಾಂಗ್‌ಥೆಮ್ ಹೇಮಂತ ಸಿಂಗ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಪಾವೊಮ್ ಬ್ರೋಜೆನ್ ಸಿಂಗ್‌ಗಿಂತ 675 ಮತಗಳಿಂದ ಮುಂದಿದ್ದಾರೆ.

ಲಿಯಾಂಗ್‌ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗಳ ನಡುವೆ ಪೈಪೋಟಿ ಜೋರಾಗಿದ್ದು, ಸ್ವತಂತ್ರ ಅಭ್ಯರ್ಥಿ ವೈ ಅಂತಾಸ್‌ ಖಾನ್‌, ಪ್ರತಿಸ್ಪರ್ಧಿ ಮೊಹಮ್ಮದ್‌ ಅಬ್ದುಲ್‌ ನಸೀರ್‌ ಅವರಿಂದ 1,992 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು