ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ವಿರುದ್ಧ ಜನ ಜಾಗೃತಿಯೇ ಶಕ್ತಿ: ಪ್ರಧಾನಿ ಮೋದಿ

ಲಸಿಕೆ ಅಭಿಯಾನದ ಸಾಧನೆ ಅಭೂತಪೂರ್ವ: ಪ್ರಧಾನಿ ‘ಮನದ ಮಾತು’
Last Updated 26 ಡಿಸೆಂಬರ್ 2021, 18:08 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ವಿರುದ್ಧದ ಹೋರಾಟದಲ್ಲಿ ವೈಯಕ್ತಿಕ ಜಾಗೃತಿ ಮತ್ತು ಶಿಸ್ತು ದೇಶದ ಬಹುದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿ ದ್ದಾರೆ. ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋವಿಡ್‌–19 ತಡೆ ಲಸಿಕೆ ಹಾಕಿಸು ವಿಕೆಯ ಜಾಗತಿಕ ಅಂಕಿ ಅಂಶಗಳಿಗೆ ಹೋಲಿಸಿದರೆ, ಲಸಿಕೆ ಅಭಿಯಾನದಲ್ಲಿ ಭಾರತವು ಅಭೂತಪೂರ್ವ ಎನ್ನು ವಂತಹ ಸಾಧನೆ ಮಾಡಿದೆ. ಹಾಗಿದ್ದರೂ ಜನರು ವೈರಾಣುವಿನ ಹೊಸ ತಳಿಯ ಬಗ್ಗೆ ಎಚ್ಚರದಿಂದ ಇರಬೇಕು. ಓಮೈಕ್ರಾನ್‌ ತಳಿಯ ಬಗ್ಗೆ ವಿಜ್ಞಾನಿಗಳು ನಿರಂತರ ಅಧ್ಯಯನ ನಡೆಸುತ್ತಿ ದ್ದಾರೆ. ಪ್ರತಿ ದಿನವೂ ಅವರಿಗೆ ಹೊಸ ಹೊಸ ಮಾಹಿತಿಗಳು ಸಿಗುತ್ತಿವೆ. ಅವರ ಸಲಹೆಗಳ ಆಧಾರದಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

‘ನಮ್ಮ ಸಾಮೂಹಿಕ ಶಕ್ತಿಯು ಕೊರೊನಾವನ್ನು ಸೋಲಿಸಲಿದೆ. ಈ ಹೊಣೆಗಾರಿಕೆ ಭಾವದೊಂದಿಗೆ ನಾವು 2022ನೇ ವರ್ಷಕ್ಕೆ ಪ್ರವೇಶಿಸಬೇಕಿದೆ’ ಎಂದು ಅವರು ಕರೆ ಕೊಟ್ಟಿದ್ದಾರೆ.

‘ಲಸಿಕೆ ನೀಡಿಕೆಯು 140 ಕೋಟಿ ಡೋಸ್‌ಗಳನ್ನು ಮೀರಿ ಮುಂದೆ ಸಾಗಿದೆ ಎಂಬುದು‍ ಪ್ರತಿ ಭಾರತೀಯನ ಸಾಧನೆ. ಪ್ರತಿಯೊಬ್ಬ ಭಾರತೀಯ ವ್ಯವಸ್ಥೆ, ವಿಜ್ಞಾನ ಮತ್ತು ವಿಜ್ಞಾನಿಗಳ ಮೇಲೆ ಇರಿಸಿರುವ ವಿಶ್ವಾಸವನ್ನು ಇದು ತೋರಿಸುತ್ತದೆ’ ಎಂದು ಹೇಳಿದ್ದಾರೆ.

ಭಾರತೀಯ ಸಂಸ್ಕೃತಿ ಬಗ್ಗೆ ತಿಳಿದು ಕೊಳ್ಳುವ ಹಂಬಲ ಜಗತ್ತಿನಲ್ಲಿ ಹೆಚ್ಚಾಗಿದೆ. ಸರ್ಬಿಯಾದ ವಿದ್ವಾಂಸಡಾ. ಮೊಮಿರ್‌ ನಿಕಿಚ್‌ ಅವರು ಸಂಸ್ಕೃತ–ಸರ್ಬಿಯಾ ಭಾಷೆಯ ಪದಕೋಶ ರಚಿಸಿದ್ದಾರೆ ಎಂದು ಮೋದಿ ಹೇಳಿದರು. ಮಂಗೋಲಿಯಾದ ಪ್ರಾಧ್ಯಾಪಕ 93 ವರ್ಷದ ಜೆ. ಜೆಂಡೆಧ್‌ರಾಮ್‌ ಭಾರತದ 40ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ನಾಲ್ಕು ದಶಕಗಳಲ್ಲಿ ಮಂಗೋಲಿಯಾ ಭಾಷೆಗೆ ಅನುವಾದಿಸಿದ್ದಾರೆ ಎಂದರು.

ವರುಣ್‌ ಸ್ಮರಣೆ

ತಮಿಳುನಾಡಿನ ಕೂನೂರು ಸಮೀಪ ಸೇನಾ ಹೆಲಿಕಾಪ್ಟರ್‌ ಪತನದಲ್ಲಿ ಗಾಯಗೊಂಡು, ಬೆಂಗಳೂರಿನ ಆಸ್ಪತ್ರೆಯಲ್ಲಿ ನಂತರ ಮೃತಪಟ್ಟ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರನ್ನು ಪ್ರಧಾನಿ ನೆನಪಿಸಿಕೊಂಡಿದ್ದಾರೆ. ಅಪ್ರತಿಮ ಕೌಶಲಕ್ಕಾಗಿ ಶೌರ್ಯ ಚಕ್ರ ಪ್ರಶಸ್ತಿ ಪಡೆದುಕೊಂಡ ನಂತರ, ವರುಣ್‌ ಸಿಂಗ್‌ ಅವರು ತಾವು ಕಲಿತ ಶಾಲೆಯ ಮಕ್ಕಳಿಗೆ ಬರೆದ ಸ್ಫೂರ್ತಿದಾಯಕ ಪತ್ರವನ್ನು ಪ್ರಧಾನಿ ಉಲ್ಲೇಖಿಸಿದರು.

‘ಯಶಸ್ತಿನ ಉತ್ತುಂಗಕ್ಕೆ ತಲುಪಿದಾಗಲೂ ತಮ್ಮ ಬೇರುಗಳನ್ನು ಪೋಷಿಸಲು ಅವರು ಮರೆಯಲಿಲ್ಲ ಎಂಬ ಅಂಶವು ಈ ಪತ್ರವನ್ನು ಓದಿದ ಬಳಿಕ ಮೊದಲು ತಲೆಗೆ ಬಂತು. ಎರಡನೆಯದಾಗಿ, ಸಂಭ್ರಮಿಸಬೇಕಾದ ಸಂದರ್ಭದಲ್ಲಿ ಕೂಡ ಅವರು ಮುಂದಿನ ತಲೆಮಾರುಗಳ ಬಗ್ಗೆ ಕಾಳಜಿ ತೋರಿದ್ದರು’ ಎಂದು ಮೋದಿ ಹೇಳಿದ್ದಾರೆ.

ಒಬ್ಬ ವಿದ್ಯಾರ್ಥಿಯಲ್ಲಿ ಸ್ಫೂರ್ತಿ ತುಂಬಲು ಸಾಧ್ಯವಾದರೂ ಅದು ಭಾರಿ ಮಹತ್ವದ್ದು ಎಂದು ವರುಣ್‌ ಅವರು ಬರೆದಿದ್ದರು. ಆದರೆ, ಅವರು ಇಡೀ ದೇಶಕ್ಕೇ ಸ್ಫೂರ್ತಿ ತುಂಬಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.

ಪ್ರಧಾನಿ ಹೇಳಿದ್ದೇನು?

l ಪ್ರತೀ ವರ್ಷದಂತೆ ಈ ವರ್ಷವೂ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು Mygov.in ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು

l ಮೊಬೈಲ್‌ ಪರದೆ ನೋಡುವ ಸಮಯ ಹೆಚ್ಚಾಗಿರುವ ಈ ಕಾಲದಲ್ಲಿಯೂ ಪುಸ್ತಕ ಓದುವಿಕೆಯು ಹೆಚ್ಚು ಜನಪ್ರಿಯ ಆಗಬೇಕು. ‘ಮನದ ಮಾತು’ ಕೇಳುಗರು ತಮ್ಮ ನೆಚ್ಚಿನ ಐದು ‍ಪುಸ್ತಕಗಳ ಹೆಸರು ಉಲ್ಲೇಖಿಸಬೇಕು

l ಜನರು ತಮ್ಮ ಕನಸುಗಳನ್ನು ನನಸಾಗಿಸಬೇಕು. ಅದಕ್ಕಾಗಿ ದೊಡ್ಡದ್ದನ್ನು ಯೋಚಿಸಬೇಕು, ದೊಡ್ಡ ಕನಸು ಕಾಣಬೇಕು ಮತ್ತು ಶ್ರಮ ವಹಿಸಿ ಕೆಲಸ ಮಾಡಬೇಕು

l ತಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕಿಂತ, ಉತ್ತಮ ಕೆಲಸ ಮಾಡುತ್ತಿದ್ದು ಮಾಧ್ಯಮದ ಗಮನದಿಂದ ದೂರವೇ ಉಳಿದಿರುವ ಅಸಂಖ್ಯ ಜನರ ಬಗ್ಗೆ ಮಾತನಾಡುವುದಕ್ಕೆ ಮನದ ಮಾತು ಕಾರ್ಯಕ್ರಮವನ್ನು ಬಳಸಿಕೊಳ್ಳುತ್ತಿದ್ದೇನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT