ಶನಿವಾರ, ಮೇ 21, 2022
28 °C

ಉತ್ತರ ಪ್ರದೇಶ ಪಂಚಾಯತ್ ಅಭ್ಯರ್ಥಿ ಹಂಚಿದ ಮದ್ಯ ಸೇವಿಸಿ ಇಬ್ಬರ ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

Representative image. Credit: iStock

ಬದಾನ್: ಉತ್ತರ ಪ್ರದೇಶದ ತಿಗಳ್ಪುರ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಕಲಿ ಮದ್ಯ ಹಂಚಿದ್ದು, ಅದನ್ನು ಸೇವಿಸಿದ್ದವರ ಪೈಕಿ ಇಬ್ಬರು ಸಾವನ್ನಪ್ಪಿದ್ದರೆ, ಓರ್ವ ದೃಷ್ಟಿ ಕಳೆದುಕೊಂಡಿದುಕೊಂಡಿದ್ದಾನೆ, ಹಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಳಿ ಸಂದರ್ಭದಲ್ಲಿ ಪಂಚಾಯತ್ ಚುನಾವಣೆ ಸಂಬಂಧ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮದ್ಯ ಹಂಚಿದ್ದರು. ಅದನ್ನು ಸೇವಿಸಿದ ಸಂಜಯ್ ಸಿಂಗ್ ಮತ್ತು ಪ್ರೇಮದಾಸ್ ಎಂಬಿಬ್ಬರು ಸಾವನ್ನಪ್ಪಿದ್ದಾರೆ. ಅಮರ್ ಸಿಂಗ್ ಎಂಬವರ ದೃಷ್ಟಿ ಹೊರಟುಹೋಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ತಿಳಿಸಿದ್ದಾರೆ.

ಮದ್ಯ ಸೇವಿಸಿ ಅಸ್ವಸ್ಥರಾಗಿದ್ದ ಸಂಜಯ್ ಸಿಂಗ್ ಮತ್ತು ಪ್ರೇಮದಾಸ್  ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಮೂವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಾ ರಂಜನ್ ಈ ವಿಚಾರವನ್ನು ತನಿಖೆ ಮಾಡುವುದಾಗಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು