ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

MCD Election Result | ಎಎಪಿಯಿಂದ ಮಂಗಳಮುಖಿ ಜಯಭೇರಿ

ಮದುವೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸರ್‌ ಆಗಿ ಕೆಲಸ ಮಾಡುತ್ತಿದ್ದಾಕೆ ಈಗ ಪಾಲಿಕೆ ಸದಸ್ಯೆ
Last Updated 7 ಡಿಸೆಂಬರ್ 2022, 9:17 IST
ಅಕ್ಷರ ಗಾತ್ರ

ದೆಹಲಿ: ದೆಹಲಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಮಂಗಳಮುಖಿಯೊಬ್ಬರು ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ದೆಹಲಿ ಪಾಲಿಕೆಗೆ ಆಯ್ಕೆಯಾದ ಮೊದಲ ಮಂಗಳಮುಖಿ ಎನ್ನುವ ಹೆಗ್ಗಳಿಕೆಗೆ ‍ಪಾತ್ರವಾಗಿದ್ದಾರೆ.

ಬೋಬಿ ಡಾರ್ಲಿಂಗ್‌ ಎಂದೇ ಖ್ಯಾತರಾಗಿರುವ ಸುಲ್ತಾನ್‌ಪುರಿಯ ಬೋಬಿ ಕಿನ್ನರ್‌ ಎಂಬವರು, ಸುಲ್ತಾನ್‌ಪುರಿ ವಾರ್ಡ್‌ನಿಂದ ಗೆಲುವು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ಆಮ್‌ ಆದ್ಮಿ ಪಕ್ಷವು ಮಂಗಳಮುಖಿಯೊಬ್ಬರಿಗೆ ಟಿಕೆಟ್‌ ನೀಡಿತ್ತು.

ಬೋಬಿ ಕಿನ್ನರ್ ಈ ಹಿಂದೆ 2017ರಲ್ಲಿ ಕೂಡ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಸುಲ್ತಾನ್‌ಪುರಿಯಲ್ಲಿ ತಮ್ಮ ಸಾಮಾಜಿಕ ಚಟುವಟಿಕೆಗಳ ಮೂಲಕ ಬೋಬಿ ಹೆಸರು ಪಡೆದಿದ್ದರು. ಹಿಂದೂ ಯುವ ಸಮಾಜ ಎಕ್ತಾ ಅವಾಮ್‌ ಎನ್ನುವ ಉಗ್ರ ನಿಗ್ರಹ ಸಮಿತಿಯ ದೆಹಲಿ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸುಲ್ತಾನ್‌ಪುರಿಯಲ್ಲೇ ಹುಟ್ಟಿ ಬೆಳೆದಿರುವ 38 ವರ್ಷದ ಬೋಬಿ, ತಮ್ಮ 14ನೇ ವಯಸ್ಸಿಗೆ ಮಂಗಳಮುಖಿ ಸಮಾಜವನ್ನು ಸೇರಿಕೊಂಡು ಬಳಿಕ ಮದುವೆ ಸಮಾರಂಭಗಳಲ್ಲಿ ಡ್ಯಾನ್ಸರ್‌ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಸಾಮಾಜಿಕ ಚಟುವಟಿಕೆಗಳ ಮೂಲಕ ರಾಜಕೀಯ ಪ್ರವೇಶವನ್ನೂ ಮಾಡಿದರು.

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕೂಡ ಬೋಬಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT